ಬೆಂಗಳೂರಿಂದ ಕೆಆರ್​ಎಸ್​ವರೆಗೆ ರ‍್ಯಾಲಿಯಲ್ಲಿ ಹೊರಟು ಜಲಾಶಯದ ಬಳಿ ಸತ್ಯಾಗ್ರಹ ಮಾಡುತ್ತೇವೆ: ವಾಟಾಳ್ ನಾಗರಾಜ್

ಬೆಂಗಳೂರಿಂದ ಕೆಆರ್​ಎಸ್​ವರೆಗೆ ರ‍್ಯಾಲಿಯಲ್ಲಿ ಹೊರಟು ಜಲಾಶಯದ ಬಳಿ ಸತ್ಯಾಗ್ರಹ ಮಾಡುತ್ತೇವೆ: ವಾಟಾಳ್ ನಾಗರಾಜ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 05, 2023 | 1:48 PM

ರ‍್ಯಾಲಿಯು ಬಿಡದಿ-ರಾಮನಗರ-ಮಂಡ್ಯ-ಮದ್ದೂರು-ಶ್ರೀರಂಗಪಟ್ಟಣಗಳ ಮೂಲಕ ಕೆಆರ್ ಎಸ್ ತಲುಪಿದ ನಂತರ ಅಲ್ಲಿ ತಮಿಳುನಾಡುಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಸತ್ಯಾಗ್ರಹ ನಡೆಸಲಾಗುವುದು, ರಸ್ತೆಯಲ್ಲಿ ಹಲವಾರು ಊರು, ಪಟ್ಟಣಗಳಲ್ಲಿರುವ ಕನ್ನಡ ಸಂಘಟನೆಗಳ ಸದಸ್ಯರು ರ‍್ಯಾಲಿಯಲ್ಲಿ ಸೇರಲಿದ್ದಾರೆ ಎಂದು ವಾಟಾಳ್ ಹೇಳಿದರು.

ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಕನ್ನಡ ಪರ ಸಂಘಟನೆಗಳ (pro Kannada organizations) ಹೋರಾಟ ಮುಂದುವರಿದಿದೆ. ಮೊನ್ನೆ ಅಖಿಲ ಕರ್ನಾಟಕ ಬಂದ್ (Karnataka Bandh) ಆಯೋಜಿಸಿ ತಮಿಳುನಾಡುಗೆ ನೀರು ಬಿಡದಂತೆ ಸರ್ಕಾರವನ್ನು ಆಗ್ರಹಿಸಿದರೂ ಸರ್ಕಾರದ ಮೇಲೆ ಯಾವುದೇ ಪರಿಣಾಮ ಎನ್ನುತ್ತಿರುವ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj), ನೀರು ಬಿಡೋದನ್ನು ನಿಲ್ಲಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದರು. ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಅವರು ಹೋರಾಟದ ಭಾಗವಾಗಿ ಬೆಂಗಳೂರು ನಗರದಿಂದ ಕೆಆರ್ ಎಸ್ ಜಲಾಶಯದವರೆಗೆ ವಾಹನ ರ‍್ಯಾಲಿಯನ್ನು ಆಯೋಜಿಸಲಾಗಿದ್ದು ಇದರಲ್ಲಿ ಕನ್ನಡ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ರ‍್ಯಾಲಿಯು ಬಿಡದಿ-ರಾಮನಗರ-ಮಂಡ್ಯ-ಮದ್ದೂರು-ಶ್ರೀರಂಗಪಟ್ಟಣಗಳ ಮೂಲಕ ಕೆಆರ್ ಎಸ್ ತಲುಪಿದ ನಂತರ ಅಲ್ಲಿ ತಮಿಳುನಾಡುಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಸತ್ಯಾಗ್ರಹ ನಡೆಸಲಾಗುವುದು, ರಸ್ತೆಯಲ್ಲಿ ಹಲವಾರು ಊರು, ಪಟ್ಟಣಗಳಲ್ಲಿರುವ ಕನ್ನಡ ಸಂಘಟನೆಗಳ ಸದಸ್ಯರು ರ‍್ಯಾಲಿಯಲ್ಲಿ ಸೇರಲಿದ್ದಾರೆ ಎಂದು ಹೇಳಿದರು. ರ‍್ಯಾಲಿಯನ್ನು ರಾಷ್ಟ್ರೀಯ ಹೆದ್ದಾರಿ ಬಿಟ್ಟು ಬೇರೆ ಮಾರ್ಗದಿಂದ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ