ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ; ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಹೊಸ ಮೈಲಿಗಲ್ಲು

Updated on: Sep 18, 2026 | 10:09 PM

ಭಾರತಕ್ಕೆ ಚಿರತೆಗಳನ್ನು ಮರುಪರಿಚಯಿಸುವ ಯೋಜನೆಯಡಿ, ವಿದೇಶದಿಂದ ತರಲಾದ ಚಿರತೆಗಳು ಭಾರತದಲ್ಲಿ ಮರಿಗಳಿಗೆ ಜನ್ಮ ನೀಡಿದ್ದವು. ಆದರೆ ಈಗ ಭಾರತದಲ್ಲೇ ಹುಟ್ಟಿದ ಚಿರತೆಯು 4 ಆರೋಗ್ಯಕರ ಮರಿಗಳಿಗೆ ಜನ್ಮ ನೀಡುವ ಮೂಲಕ ಭಾರತೀಯ ವಾತಾವರಣಕ್ಕೆ ಚಿರತೆಗಳು ಸಂಪೂರ್ಣವಾಗಿ ಒಗ್ಗಿಕೊಂಡಿವೆ ಎಂಬುದನ್ನು ಸಾಬೀತುಪಡಿಸಿದೆ. ಈ 4 ಹೊಸ ಮರಿಗಳ ಜನನದೊಂದಿಗೆ ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಒಟ್ಟು ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದ್ದು, ಭಾರತದಲ್ಲಿ ಚಿರತೆಗಳ ಸಂತತಿ ಬೆಳೆಸುವ ಕೇಂದ್ರ ಸರ್ಕಾರದ ಕನಸಿಗೆ ಭಾರಿ ಬಲ ಬಂದಿದೆ.

ಭೋಪಾಲ್, ಸೆಪ್ಟೆಂಬರ್ 18: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ‘ಕೂನೋ ರಾಷ್ಟ್ರೀಯ ಉದ್ಯಾನವನ’ದಲ್ಲಿ ‘ಪ್ರಾಜೆಕ್ಟ್ ಚೀತಾ‘ ಯೋಜನೆಗೆ ಮತ್ತೊಂದು ಐತಿಹಾಸಿಕ ಯಶಸ್ಸು ಸಿಕ್ಕಿದೆ. ಕೂನೋ ಉದ್ಯಾನವನದಲ್ಲಿ ಹೊಸದಾಗಿ 4 ಚಿರತೆ ಮರಿಗಳು ಜನಿಸಿದ್ದು, ವನ್ಯಜೀವಿ ಪ್ರೇಮಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ಈ ಸಂಭ್ರಮಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಈ 4 ಮರಿಗಳಿಗೆ ಜನ್ಮ ನೀಡಿದ ತಾಯಿ ಚಿರತೆಯು ವಿದೇಶದಿಂದ ತಂದ ಚಿರತೆಯಲ್ಲ, ಬದಲಾಗಿ ‘ಪ್ರಾಜೆಕ್ಟ್ ಚೀತಾ’ ಯೋಜನೆಯಡಿ ಭಾರತದ ನೆಲದಲ್ಲೇ ಜನಿಸಿದ ಚಿರತೆ! ಭಾರತದಲ್ಲೇ ಹುಟ್ಟಿ ಬೆಳೆದ ಚಿರತೆಯೊಂದು ಈಗ ತಾಯಿಯಾಗಿ ಮುಂದಿನ ಪೀಳಿಗೆಗೆ ಜನ್ಮ ನೀಡಿರುವುದು ಈ ಯೋಜನೆಯ ಅತಿದೊಡ್ಡ ಮೈಲಿಗಲ್ಲು.

ಭಾರತಕ್ಕೆ ಚಿರತೆಗಳನ್ನು ಮರುಪರಿಚಯಿಸುವ ಯೋಜನೆಯಡಿ, ವಿದೇಶದಿಂದ ತರಲಾದ ಚಿರತೆಗಳು ಭಾರತದಲ್ಲಿ ಮರಿಗಳಿಗೆ ಜನ್ಮ ನೀಡಿದ್ದವು. ಆದರೆ ಈಗ ಭಾರತದಲ್ಲೇ ಹುಟ್ಟಿದ ಚಿರತೆಯು 4 ಆರೋಗ್ಯಕರ ಮರಿಗಳಿಗೆ ಜನ್ಮ ನೀಡುವ ಮೂಲಕ ಭಾರತೀಯ ವಾತಾವರಣಕ್ಕೆ ಚಿರತೆಗಳು ಸಂಪೂರ್ಣವಾಗಿ ಒಗ್ಗಿಕೊಂಡಿವೆ ಎಂಬುದನ್ನು ಸಾಬೀತುಪಡಿಸಿದೆ. ಈ 4 ಹೊಸ ಮರಿಗಳ ಜನನದೊಂದಿಗೆ ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಒಟ್ಟು ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದ್ದು, ಭಾರತದಲ್ಲಿ ಚಿರತೆಗಳ ಸಂತತಿ ಬೆಳೆಸುವ ಕೇಂದ್ರ ಸರ್ಕಾರದ ಕನಸಿಗೆ ಭಾರಿ ಬಲ ಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More