AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಬಿಐಟಿ ಯೋಜನೆ ವಿರೋಧಿಸಿ ಮಾಗಡಿ ಶಾಸಕ ಬಾಲಕೃಷ್ಣ ಎದುರು ಮಹಿಳೆಯರ ರೋಶಾವೇಷ

ಜಿಬಿಐಟಿ ಯೋಜನೆ ವಿರೋಧಿಸಿ ಮಾಗಡಿ ಶಾಸಕ ಬಾಲಕೃಷ್ಣ ಎದುರು ಮಹಿಳೆಯರ ರೋಶಾವೇಷ

ಪ್ರಶಾಂತ್​ ಬಿ.
| Updated By: ಪ್ರಸನ್ನ ಹೆಗಡೆ|

Updated on: Nov 07, 2025 | 12:24 PM

Share

ಬಿಡದಿ ಬಳಿ ಗ್ರೇಟರ್ ಬೆಂಗಳೂರು ಟೌನ್​ಶಿಪ್ ಯೋಜನೆಗೆ ಭಅರಿ ವಿರೋಧ ಕೇಳಿಬರುತ್ತಿರುವ ನಡುವೆ, ಇದೇ ವಿಚಾರವಾಗಿ ಮಾಗಡಿ ಶಾಸಕ ಹೆಚ್​.ಸಿ.ಬಾಲಕೃಷ್ಣ ಕಾರು ಅಡ್ಡಗಟ್ಟಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಅರಳಾಳುಸಂದ್ರ ಬಳಿ ಈ ಘಟನೆ ನಡೆದಿದೆ.

ರಾಮನಗರ, ನವೆಂಬರ್​ 07: ಬಿಡದಿ ಬಳಿ ಗ್ರೇಟರ್ ಬೆಂಗಳೂರು ಟೌನ್​ಶಿಪ್ ಯೋಜನೆ ವಿರೋಧಿಸಿ ಮಾಗಡಿ ಶಾಸಕ ಹೆಚ್​.ಸಿ.ಬಾಲಕೃಷ್ಣ ಕಾರು ಅಡ್ಡಗಟ್ಟಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಅರಳಾಳುಸಂದ್ರ ಬಳಿ ಘಟನೆ ನಡೆದಿದ್ದು, ಈ ವೇಳೆ ಶಾಸಕರ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಪಕ್ಷದ ಕಾರ್ಯಕರ್ತರೋರ್ವರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಶಾಸಕ ಬಾಲಕೃಷ್ಣ ಬಂದಿದ್ದ ವೇಳೆ ಮಹಿಳೆಯರು ಕಾರು ಅಡ್ಡಗಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.