ಉಡುಪಿ: ಹರಿಯುವ ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡವಲ್ಲದೆ ಮತ್ತೇನೂ ಅಲ್ಲ!

ಉಡುಪಿ: ಹರಿಯುವ ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡವಲ್ಲದೆ ಮತ್ತೇನೂ ಅಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 08, 2024 | 9:02 PM

ಕಾರಲ್ಲಿದ್ದವರು ನಿಜಕ್ಕೂ ಅದೃಷ್ಟವಂತರು. ಹರಿಯುವ ನೀರಲ್ಲಿ ಕಾರಿನ ಕಿಟಕಿಗಳ ಮೂಲಕ ಹೊರಗೆ ಜಿಗಿಯುವುದು ಸಾಮಾನ್ಯ ಸಂಗತಿಯಲ್ಲ. ಹರಿಯುವ ನೀರಿನ ಸೆಳೆತವನ್ನು ಅವರು ನಿರ್ಲಕ್ಷಿಸಿ ಕಾರನ್ನು ಓಡಿಸಿ ಮತ್ತೊಂದು ತುದಿಯನ್ನು ಮುಟ್ಟುವ ಪ್ರಯತ್ನ ಮಾಡಿದ್ದು ಅಗಲೇ ಹೇಳಿದಂತೆ ಮೂರ್ಖತನ. ಇವರಿಂದ ಎಲ್ಲರೂ ಪಾಠ ಕಲಿಯಬೇಕಿದೆ.

ಉಡುಪಿ: ಇಂಥ ಹುಚ್ಚು ಸಾಹಸಗಳು ಬೇಡ ಅಂತ ನಾವು ಪದೇಪದೆ ಹೇಳುತ್ತಿರುತ್ತೇವೆ. ಇದು ಹುಚ್ಚುತನ, ಮೂರ್ಖತನ ಮತ್ತು ಭಂಡತನ ಪರಮಾವಧಿ. ಕಾರಿನಲ್ಲಿದ್ದವರು ಜೀವ ಉಳಿಸಿಕೊಂಡಿದ್ದೇ ಪವಾಡ. ಉಡುಪಿ ಜಿಲ್ಲೆಯ ಕನ್ನರ್ಪಾಡಿ ಮತ್ತು ಖಡೆಕಾರು ಸಂಪರ್ಕ ರಸ್ತೆಯಲ್ಲಿ ಈ ಅನಾಹುತ ಜರುಗಿದೆ. ಸಂಪೂರ್ಣವಾಗಿ ಜಲಾವೃತಗೊಂಡಿದ್ದ ರಸ್ತೆಯಲ್ಲಿ ಈ ಕಾರಿನಲ್ಲಿದ್ದವರು ಕಾರು ಓಡಿಸುವ ಮೂರ್ಖತನ ಮಾಡಿದ್ದಾರೆ. ನೀರು ಪ್ರವಾಹದೋಪಾದಿಯಲ್ಲಿ ಹರಿಯುತ್ತಿದ್ದುದನ್ನು ಅವರು ಅಂಡರ್ ಎಸ್ಟಿಮೇಟ್ ಮಾಡಿದ್ದಾರೆ. ನೀರಿನ ಸೆಳೆತ ಜೋರಾಗಿದ್ದ ಕಾರಣ ಕಾರು ಕೊಚ್ಚಿಕೊಂಡು ಹೋಗಿದೆ. ಕಾರಿಲ್ಲಿನಲ್ಲಿದ್ದ ನಾಲ್ವರು ಕನಿಷ್ಟ ಆಗಲಾದರೂ ಸಮಯ ಪ್ರಜ್ಞೆ ಬಳಸಿ ಕಾರಿನಿಂದ ಹೊರಗೆ ಹಾರಿ ಪ್ರಾಣ ಬಚಾವು ಮಾಡಿಕೊಂಡಿದ್ದಾರೆ. ಕೊಚ್ಚಿ ಹೋಗಿದ್ದ ಕೆಂಪು ಬಣ್ಣದ ಕಾರು ಗದ್ದೆಯೊಂದರಲ್ಲಿ ಸಿಲಿಕಿಕೊಂಡಿದೆ. ಆಗ್ನಿ ಶಾಮಕ ದಳದ ಸಿಬ್ಬಂದಿ ಕೆಲ ಸ್ಥಳೀಯರ ನೆರವಿನೊಂದಿಗೆ ಕಾರನ್ನು ನೀರಿನಿಂದ ಮೇಲಕ್ಕೆಳಿಯುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದಲೇ ದಟ್ಟ ಮೋಡ ಮತ್ತು ಧಾರಾಕಾರ ಮಳೆ!

Published on: Jul 08, 2024 09:01 PM