ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಸಿಕ್ಕೇ ಸಿಗುತ್ತದೆ, ನಮ್ಮ ಪ್ರಣಾಳಿಕೆಯ ಭಾಗವದು: ಈಶ್ವರ್ ಖಂಡ್ರೆ

Updated on: Aug 04, 2025 | 7:57 PM

ದಲಿತ ಸಮುದಾಯದ ಒಳ ಮೀಸಲಾತಿ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಈಶ್ವರ್ ಖಂಡ್ರೆ, ವರದಿ ಮುಖ್ಯಮಂತ್ರಿಯವರ ಕೈಸೇರಿದೆ ಮತ್ತು ಅವರು ಬಗೆಹರಿಸುವುದಾಗಿ ಹೇಳಿದ್ದಾರೆ, ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಅದನ್ನು ಹೇಳಿದ್ದೀವಿ, ವಿರೋಧ ಪಕ್ಷಗಳ ಆಡುವ ಡ್ರಾಮಾಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅವರು ಟ್ರೈನು ನಿಂತಾಗ ನಿಲ್ಲು ಅನ್ನುತ್ತಾರೆ, ಹೊರಡಲನುವಾದಾಗ ಹೋಗಲಿ ಅನ್ನುತ್ತಾರೆ ಎಂದರು.

ಮೈಸೂರು, ಆಗಸ್ಟ್ 4: ಕೆಆರ್​ಎಸ್ ಆಣೆಕಟ್ಟಿಗೆ ಅಡಿಗಲ್ಲು ಟಿಪ್ಪು ಸುಲ್ತಾನ ಹಾಕಿದ್ದು ಅಂತ ಸಚಿವ ಹೆಚ್ ಸಿ ಮಹದೇವಪ್ಪನವರು ಹೇಳಿದ್ದರೆ ಅವರನ್ನೇ ಕೇಳಬೇಕು, ಈ ಪ್ರಶ್ನೆಯನ್ನು ಈಗಷ್ಟೇ ತನಗೆ ಕೇಳಲಾಗಿದೆ, ಇತಿಹಾಸ ಗೊತ್ತಿಲ್ಲದಿರುವ ಕಾರಣ ಅದರ ಬಗ್ಗೆ ತಿಳಿದುಕೊಂಡು ಹೇಳುತ್ತೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹುಲಿಗಳ ಸಾವು ವಿಷಪ್ರಾಶನದಿಂದ ಆಗಿದೆ, ಅಧಿಕಾರಿಗಳ ತಂಡ ವರದಿಯನ್ನು ಸಲ್ಲಿಸಿದೆ, ತಮಿಳುನಾಡು ಗಡಿ ಪ್ರದೇಶಗಳಿಂದ ಜಾನುವಾರುಗಳು ಕರ್ನಾಟಕವನ್ನು ಪ್ರವೇಶಿಸಿ ಇಲ್ಲಿನ ಹುಲ್ಲುಗಾವಲುಗಳಲ್ಲಿ ಮೇಯುತ್ತಿರುವುದರಿಂದ ನಮ್ಮ ರಾಜ್ಯದ ಜಾನುವಾರುಗಳಿಗೆ ಹುಲ್ಲು ಸಿಗದ ಸ್ಥಿತಿ ನಿರ್ಮಾಣವಾಗಿದೆ, ಅಧಿಕಾರಗಳ ನಿರ್ಲಕ್ಷ್ಯತನ ಇದಕ್ಕೆ ಕಾರಣವಾಗಿದೆ ಎಂದು ಖಂಡ್ರೆ ಹೇಳಿದರು.

ಇದನ್ನೂ ಓದಿ:  ಕೆಆರ್​ಎಸ್ ಡ್ಯಾಂ ಅಡಿಗಲ್ಲು ವಿವಾದ: ಹಾಗೆ ಹೇಳೇ ಇಲ್ಲವೆಂದ ಹೆಚ್​ಸಿ ಮಹದೇವಪ್ಪ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ