ನಟ ದರ್ಶನ್ ಗೆ ಸರ್ಜಿಕಲ್ ಚೇರ್ ಒದಗಿಸುವ ವಿಚಾರ ಜೈಲಧಿಕಾರಿಗಳ ಸುಪರ್ದಿಗೆ ಬಿಟ್ಟಿದ್ದು: ಪರಮೇಶ್ವರ್
ರೇಣುಕಾಸ್ವಾಮಿ ಕೊಲೆ ಪ್ರಕರದಲ್ಲಿ ಅರೋಪಿಯಾಗಿರುವ ದರ್ಶನ್ ಗೆ ಸ್ಪೈನಲ್ ಕಾರ್ಡ್ ಸಮಸ್ಯೆಯಿದೆ ಮತ್ತು ಮೊನ್ನೆ ಅವರು ಉತ್ತರ ವಲಯದ ಡಿಐಜಿ ಟಿಪಿ ಶೇಷ ಅವರಿಗೆ ವೆಸ್ಟರ್ನ್ ಟಾಯ್ಲೆಟ್ ಒದಗಿಸಬೇಕೆಂದು ಮನವಿ ಮಾಡಿದ್ದರು. ಅವರ ಮನವಿಯನ್ನು ಪರಶೀಲಿಸುವುದಾಗಿ ಅಧಿಕಾರಿ ಹೇಳಿದ್ದರು.
ತುಮಕೂರು: ಈ ಬಾರಿಯ ದಸರಾ ಉತ್ಸವವನ್ನು ತುಮಕೂರು ಜಿಲ್ಲಾಡಳಿತ ಸಹ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು ಅದರ ಪ್ರಯುಕ್ತ ಇಂದು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್, ಬಳ್ಳಾರಿ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್ಗೆ ಸರ್ಜಿಕಲ್ ಚೇರ್ ನೀಡುವ ವಿಚಾರ ಅಲ್ಲಿನ ಜೈಲು ಅಧಿಕಾರಿಗಳ ಸುಪರ್ದಿ ಬಿಟ್ಟಿದ್ದು, ವೈದ್ಯಕೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೈದಿಗಳ ಅಗತ್ಯ ಪೂರೈಸಲು ಜೈಲು ನಿಯಮಾವಳಿಗಳಲ್ಲಿ ಅವಕಾಶವಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೀಢೀರನೆ ಕೇಂದ್ರ ಕಾರಾಗೃಹ ಭೇಟಿ ನೀಡಿದ ಜಿ ಪರಮೇಶ್ವರ್ ಜೈಲು ಸಿಬ್ಬಂದಿಯಿಂದ ಗೌರವ ರಕ್ಷೆ ಸ್ವೀಕರಿಸಿದರು