ಕಾರನ್ನು ಅಡ್ಡಗಟ್ಟಿ ಅಲೆಮಾರಿ ಜನಾಂಗಕ್ಕೆ ಮನೆ ಕೇಳಿದಾಗ ಸಚಿವ ಜಮೀರ್ಗೆ ಓಕೆ ಅನ್ನದೆ ವಿಧಿಯಿರಲಿಲ್ಲ!
ದಲಿತ ಸಂಘರ್ಷ ಸಮತಿಯ ಸದಸ್ಯರಿಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡುವುದನ್ನು ಗಮನಿಸಿ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎನ್ನುವಂತಿತ್ತು ಅವರ ವರ್ತನೆ. ಸದಸ್ಯರ ಮಾತನ್ನು ಅರ್ಧಂಬರ್ಧ ಕೇಳಿಸಿಕೊಂಡು ಅವರು ಹಿಂದೆ ಮುಂದೆ ಯೋಚಿಸದೆ ಓಯ್ ಯೆಸ್ಸ್ ಅಂದುಬಿಡುತ್ತಾರೆ! ಅದರರ್ಥ ಅಲೆಮಾರಿ ಜನಾಂಗಕ್ಕೆ ಮನೆ ಸಿಗಲಿವೆಯೇ? ಕಾದು ನೋಡಿ!
ಧಾರವಾಡ: ನವಲಗುಂದ ಶಾಸಕ ಎನ್ ಹೆಚ್ ಕೋನರೆಡ್ಡಿ ಅವರ ಮನೆಯಲ್ಲಿ ಗಡದ್ದಾಗಿ ಊಟ ಮಾಡಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡು ಹೊರಬಿದ್ದ ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರನ್ನು ದಲಿತ ಸಂಘರ್ಷ ಸಮಿತಿಯ ಸದಸ್ಯರು ಅಡ್ಡಗಟ್ಟಿ ತಡೆದರು. ಅಲೆಮಾರಿ ಜನಾಂಗಕ್ಕೆ ಮನೆಗಳನ್ನು ನೀಡಬೇಕೆಂಬ ಮನವಿ ಮಾಡಿ ಸಚಿವರಿಗೆ ಮನವಿಪತ್ರವನ್ನು ಸಲ್ಲಿಸಿದರು. ಸಮಿತಿಯ ಸದಸ್ಯರ ಮಾತು ಕೇಳಿಸಿಕೊಂಡ ಬಳಿಕ ಜಮೀರ್ ಅಹ್ಮದ್ ಅವರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅಲ್ಲಿಂದ ತೆರಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ ಖಾನ್ ಗೆ ಶಾಸಕ ಎನ್ ಹೆಚ್ ಕೋನರೆಡ್ಡಿ ಮನೆಯಲ್ಲಿ ಭರ್ಜರಿ ಔತಣ!
Published On - 6:56 pm, Mon, 2 September 24