ಫುಟ್ ಪಾತ್ ರೈಡಿಂಗ್ ವಿರುದ್ಧ ಸಿಡಿದೆದ್ದ ಸಾರ್ವಜನಿಕರು: ಗೆಸ್ಟ್ ಅಪೀರಿಯನ್ಸ್ ನಂತೆ ಬಂದು ಹೋದ ಪೊಲೀಸರು, ವಿಡಿಯೋ ವೈರಲ್
ಫುಟ್ ಪಾತ್ ಮೇಲೆ ರೈಡಿಂಗ್ ಮಾಡುವವರ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದು, ಅವರ ಜೊತೆ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರು: ಫುಟ್ ಪಾತ್ ಮೇಲೆ ರೈಡಿಂಗ್ ಮಾಡುವವರ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದು, ಅವರ ಜೊತೆ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು ಓಡಾಡುವ ಫುಟ್ ಪಾತ್ನಲ್ಲಿ ಸವಾರಿ ಮಾಡುವಂತಿಲ್ಲ. ಆದರೂ ಕೆಲವು ಬೈಕ್ ಸವಾರರು ಟ್ರಾಫಿಕ್ನಲ್ಲಿರುವಾಗ ಫುಟ್ಪಾತ್ ಮೇಲಿಂದ ಸಂಚರಿಸುತ್ತಿರುತ್ತಾರೆ. ಇದೀಗ ಅದೇ ತರಹ ಫುಟ್ ಪಾತ್ ಮೇಲೆ ಬೈಕ್ ಸವಾರಿ ಮಾಡುತ್ತಿದ್ದವನನ್ನ ಪಾದಚಾರಿಯೊಬ್ಬರು ಬೈಕ್ ಅಡ್ಡ ಹಾಕಿ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಕಿರಿಕ್ ಆಗಿದ್ದು, ಈ ವೇಳೆ ಸವಾರ ಹಾಗು ಪಾದಚಾರಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಇನ್ನು ಫುಟ್ ಪಾತ್ನಿಂದ ವಾಹನ ರಸ್ತೆಗೆ ಇಳಿಸುವವರೆಗೂ ಪಾದಚಾರಿ ಪಟ್ಟು ಬಿಡಲಿಲ್ಲ. ಇನ್ನು ಇಬ್ಬರು ಜಗಳವಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಇಬ್ಬರು ಕಾನ್ಸ್ಟೇಬಲ್ ಗಳು. ‘ಗೆಸ್ಟ್ ಅಪೀರಿಯನ್ಸ್’ ನಂತೆ ಬಂದು ಹೋಗಿದ್ದಾರೆ. ಸದ್ಯ ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us