ಪುನೀತ್ ತನ್ನ ಬಯಕೆ ಏನು ಅಂತ ನಮಗೆ ಹೇಳಿದ್ದಾನೆ, ಅದೆಲ್ಲವನ್ನು ನಾವು ಮಾಡುತ್ತೇವೆ: ರಾಘವೇಂದ್ರ ರಾಜಕುಮಾರ್
ಪುನೀತ್ ಮಾಡಿದ ನೇತ್ರದಾನದಿಂದ ನಾಲ್ಕು ಜನ ದೃಷ್ಟಿ ಮಾಂದ್ಯರ ಬದುಕಿನಲ್ಲಿ ಬೆಳಕು ಬಂದಿರೋದು ತಮಗೆ ಸಂತೋಷವನ್ನುಂಟು ಮಾಡಿದೆ. ಸತ್ತ ಮೇಲೂ ಅವರು ಜನರಿಗೆ ನೆರವಾಗುತ್ತಿದ್ದಾರೆ ಅಂತ ರಾಘಣ್ಣ ಹೇಳಿದರು
ಪುನೀತ್ ರಾಜುಕುಮಾರ್ ಅವರ ಸಹೋದರರಿಗೆ ಈಗಲೂ ನೋವು, ದುಃಖ ತಡೆದುಕೊಳ್ಳವುದು ಸಾಧ್ಯವಾಗುತ್ತಿಲ್ಲ. ಮಂಗಳವಾರದಂದು ಕಂಠೀರವ ಸ್ಟುಡಿಯೋನಲ್ಲಿ ಪುನೀತ್ ಸಮಾಧಿಗೆ ಹಾಲು ತುಪ್ಪ ಕಾರ್ಯಕ್ರಮ ನೆರವೇರಿಸಿದ ನಂತರ ಶಿವಣ್ಣ ಹಾಗೂ ರಾಘಣ್ಣ ಇಬ್ಬರೂ ಮುಂದಿನ ಕಾರ್ಯಗಳ ಕುರಿತು ಮಾಧ್ಯಮದವರ ಜೊತೆ ಮಾತಾಡಿದರು. ರಾಘವೇಂದ್ರ ಅವರು, 12 ನೇ ದಿನದ ಕಾರ್ಯವೊಂದನ್ನು ನೆರವೇರಿಸಬೇಕಿದೆ. ಅಪ್ಪು ಬಯಸಿದ ಇನ್ನೂ ಬೇರೆ ಬೇರೆ ಕಾರ್ಯಗಳಿವೆ, ಅವನ್ನೆಲ್ಲ ಯಾವಾಗ ಮಾಡಬೇಕು ಅಂತ ಮನೆಯ ಹೆಣ್ಣುಮಕ್ಕಳು ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು. ಏನೇನು ಮಾಡಬೇಕೆಂದು ಪುನೀತನೇ ಅಗಾಗ ನಮಗೆ ಹೇಳಿದ್ದಾನೆ. ಅವನು ಹೇಳಿದ್ದನ್ನೆಲ್ಲ ಮಾಡುತ್ತೇವೆ ಎಂದು ರಾಘಣ್ಣ ಹೇಳಿದರು.
ಪುನೀತ್ ಮಾಡಿದ ನೇತ್ರದಾನದಿಂದ ನಾಲ್ಕು ಜನ ದೃಷ್ಟಿ ಮಾಂದ್ಯರ ಬದುಕಿನಲ್ಲಿ ಬೆಳಕು ಬಂದಿರೋದು ತಮಗೆ ಸಂತೋಷವನ್ನುಂಟು ಮಾಡಿದೆ. ಸತ್ತ ಮೇಲೂ ಅವರು ಜನರಿಗೆ ನೆರವಾಗುತ್ತಿದ್ದಾರೆ ಅಂತ ರಾಘಣ್ಣ ಹೇಳಿದರು. ರಸ್ತೆಗಳಿಗೆ ಪುನೀತ್ ಅವರ ಹೆಸರಿಡುತ್ತಿರುವ ಬಗ್ಗೆ ಮಾತಾಡಿದ ಅವರು, ಸಾಗರದಲ್ಲಿ ಸರ್ಕಲ್ ಒಂದಕ್ಕೆ ಮತ್ತು ಶಿವಮೊಗ್ಗದಲ್ಲಿ ರಸ್ತೆಯೊಂದಕ್ಕೆ ಅವರ ಹೆಸರಿಟ್ಟಿರುವ ಬಗ್ಗೆ ತನಗೆ ಸುದ್ದಿ ಗೊತ್ತಾಗಿದೆ ಎಂದು ಹೇಳಿದರು.
ಪುನೀತ್ ತನಗೆ ಮಗನಂತಿದ್ದರು ಹಾಗಾಗಿ ಕುಟುಂಬದ ಜವಾಬ್ದಾರಿಗಳನ್ನು ಹೊತ್ತುಕೊಂಡು ಎಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕಿದೆ ಎಂದು ರಾಘಣ್ಣ ಹೇಳಿದರು. ಡಾ ರಾಜ್ ಕುಟುಂಬ ಅಭಿಮಾನಿಗಳ ಸೊತ್ತು, ಕುಟುಂಬಕ್ಕೆ ಅಭಿಮಾನಿಗಳು ಮೊದಲು, ಉಳಿದಿದ್ದೆಲ್ಲ ನಂತರ ಅಂತ ಅವರು ಹೇಳಿದರು,
ಇದನ್ನೂ ಓದಿ: ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು ಅಲುಗಾಡಿದ ವಿಡಿಯೋ ವೈರಲ್; ಪೀಠಾಧಿಪತಿಗಳಿಂದ ಸ್ಪಷ್ಟನೆ