AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಠಮಟ್ಟ ಕುಡಿದ ಗಜೇಂದ್ರಗಡ ದೇವದಾಸ ರಸ್ತೆ ಉದ್ದಗಲಗಳನ್ನು ಅಳೆದು ಬಸ್ ಡ್ರೈವರ್ ಗೆ ಆವಾಜ್ ಹಾಕಿದ್ದು!

ಕಂಠಮಟ್ಟ ಕುಡಿದ ಗಜೇಂದ್ರಗಡ ದೇವದಾಸ ರಸ್ತೆ ಉದ್ದಗಲಗಳನ್ನು ಅಳೆದು ಬಸ್ ಡ್ರೈವರ್ ಗೆ ಆವಾಜ್ ಹಾಕಿದ್ದು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 03, 2021 | 12:37 AM

ರಾತ್ರಿಯೆಲ್ಲ ಇವನಿಗಾಗಿ ಕಾಯ್ದ ಹೆಂಡತಿ ಮಕ್ಕಳು ಬರಿ ಹೊಟ್ಟೆಯಲ್ಲಿ ಮಲಗಿರುತ್ತಾರೆ. ಸದ್ಯ ಗಂಡ ಸುರಕ್ಷಿತವಾಗಿ ಮನೆಗೆ ಬಂದನಲ್ಲ ಅಂತ ಹೆಂಡತಿ ಪಕ್ಕದ ಮನೆಯಿಂದ ಒಂದಷ್ಟು ಹಿಟ್ಟು ತಂದು ಅವನಿಗಾಗಿ ಗಂಜಿ ಮಾಡಲು ಅಣಿಯಾಗುತ್ತಾಳೆ.

ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ
ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ
ಕೆಟ್ಟ ಚಾಳಿ ಇಲ್ಲದ ಕೊಟ್ಟಾರೆ ಗುಣವಂತನ
ಕೆಟ್ಟ ಚಾಳಿ ಇಲ್ಲದ ಕೊಟ್ಟಾರೆ ಗುಣವಂತನ
ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ
ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ
ಈ ಜಾನಪದ ಗೀತೆಯನ್ನು ನೀವು ಕೇಳಿರಬಹುದು. ಮದುವೆಯಾಗಲಿಕ್ಕಿರುವ ಯುವತಿಯೋರ್ವಳು ತನಗೆ ಕುಡಿತದ ಚಟವಿರದ ಸದ್ಗುಣಿ ಗಂಡನನ್ನು ಕೊಡು ಅಂತ ಶಿವನನ್ನು ಬೇಡುವ ಗೀತೆಯಿದು. ಈ ಗೀತೆಯಲ್ಲಿ ಆಕೆ ಇನ್ನೂ ಬೇರೆ ಬೇರೆ ದುರ್ಗುಣಗಳನ್ನು ಪಟ್ಟಿ ಮಾಡುತ್ತಾಳೆ. ಆದರೆ ಪಟ್ಟಿಯಲ್ಲಿ ಎಲ್ಲಕ್ಕಿಂತ ಮೇಲಿರುವ ಕೆಟ್ಟ ಗುಣವೆಂದರೆ ಕುಡಿಕತನ. ಈಗ ಇಲ್ಲಿರುವ ವಿಡಿಯೋವನ್ನು ನೋಡಿ. ಈ ದೃಶ್ಯ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಸರ್ಕಲ್ ನಲ್ಲಿ ಸೆರೆಹಿಡಿಯಲಾಗಿದೆ.

ನಮ್ಮ ಗೀತೆಯ ನಾಯಕಿ ಇಂಥ ಕುಡುಕನನ್ನು ತನ್ನ ಊರಿನಲ್ಲೋ ಅಥವಾ ಬೇರಲ್ಲೋ ನೋಡಿರಬಹುದು ಅಥವಾ ಕೇಳಿಸಿಕೊಂಡಿರಬಹುದು. ಹಾಗಾಗೇ ತನಗೆ ಕುಡುಕ ಗಂಡ ಬೇಡವೇ ಬೇಡ ಅನ್ನುತ್ತಾಳೆ.

ಈ ವ್ಯಕ್ತಿಯನ್ನು ನೋಡಿ. ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಊಟಕ್ಕಿಲ್ಲದಿದ್ದರೂ ಆದೀತು ಆದರೆ ಇವನ ಹೊಟ್ಟೆಗೆ ಮಾತ್ರ ಮದ್ಯ ಇಳಿಯಲೇ ಬೇಕು. ಹೆಂಡಕ್ಕಾಗಿ ಕುಡುಕರು ಹೇಗಾದರೂ ಮಾಡಿ ಹಣ ಹೊಂಚುತ್ತಾರೆ. ಕಂಠಮಟ್ಟ ಕುಡಿದು ಹೀಗೆ ರಸ್ತೆಗಳನ್ನು ಅಳೆಯುತ್ತಾ ರಸ್ತೆ ಬದಿಯಲ್ಲೊ ಇಲ್ಲ ಚರಂಡಿಯಲ್ಲೋ ಬಿದ್ದು ಅಲ್ಲೇ ಮಲಗಿ ಬಿಡುತ್ತಾರೆ. ಬೆಳಗ್ಗೆ ಎದ್ದಾಗ ಅಮಲು ಇಳಿದಿರುತ್ತದೆ, ಜೇಬು ಖಾಲಿಯಾಗಿರುತ್ತದೆ ಹೊಟ್ಟೆ ಚುರುಗುಟ್ಟುತ್ತಿರುತ್ತದೆ.

ರಾತ್ರಿಯೆಲ್ಲ ಇವನಿಗಾಗಿ ಕಾಯ್ದ ಹೆಂಡತಿ ಮಕ್ಕಳು ಬರಿ ಹೊಟ್ಟೆಯಲ್ಲಿ ಮಲಗಿರುತ್ತಾರೆ. ಸದ್ಯ ಗಂಡ ಸುರಕ್ಷಿತವಾಗಿ ಮನೆಗೆ ಬಂದನಲ್ಲ ಅಂತ ಹೆಂಡತಿ ಪಕ್ಕದ ಮನೆಯಿಂದ ಒಂದಷ್ಟು ಹಿಟ್ಟು ತಂದು ಅವನಿಗಾಗಿ ಗಂಜಿ ಮಾಡಲು ಅಣಿಯಾಗುತ್ತಾಳೆ. ಇದು ಕುಡುಕನ ಬದುಕು ಮತ್ತು ಅವನ ಸಂಸಾರ

ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ
ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ

ಇದನ್ನೂ ಓದಿ:  Asif Ali: ಗನ್​ನಿಂದ ಶೂಟ್ ಮಾಡೋ ರೀತಿ ಸೆಲೆಬ್ರೇಟ್ ಮಾಡಿದ ಅಸಿಫ್ ಅಲಿ: ಇಲ್ಲಿದೆ ವಿಡಿಯೋ