Puneeth Rajkumar: ಪುನೀತ್​ ಸ್ಮಾರಕಕ್ಕೆ ಕುಟುಂಬದವರಿಂದ ಪೂಜೆ; ಅಭಿಮಾನಿಗಳ ನಮನ: ಇಲ್ಲಿದೆ ಲೈವ್​ ವಿಡಿಯೋ

|

Updated on: Oct 29, 2023 | 11:27 AM

Puneeth Rajkumar Death Anniversary: ಸರದಿ ಸಾಲಿನಲ್ಲಿ ನಿಂತು ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ. ಅಪ್ಪು ಸ್ಮಾರಕದ ಬಳಿ ಜನ ಸಾಗರವೇ ನೆರೆದಿದೆ. ಮುಂಜಾನೆಯಿಂದ ರಾತ್ರಿ ತನಕ ಹಲವು ಬಗೆಯ ಕಾರ್ಯಗಳು ನಡೆಯಲಿವೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲದರ ಲೈವ್​ ವಿಡಿಯೋ ಇಲ್ಲಿದೆ..

ಅಭಿಮಾನಿಗಳ ಪಾಲಿಗೆ ಪುನೀತ್​ ರಾಜ್​ಕುಮಾರ್​ ಅವರ ಸ್ಮಾರಕ (Puneeth Rajkumar Smaraka) ಒಂದು ಪುಣ್ಯಸ್ಥಳವೇ ಆಗಿದೆ. ಇಂದು (ಅಕ್ಟೋಬರ್​ 29) ಪುನೀತ್​ ಅವರ 2ನೇ ವರ್ಷದ ಪುಣ್ಯಸ್ಮರಣೆ (Puneeth Rajkumar Death Anniversary) ನಡೆಯುತ್ತಿದೆ. ಆ ಪ್ರಯುಕ್ತ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪುನೀತ್​ಗೆ ಇಷ್ಟವಾಗಿದ್ದ ಅಡುಗೆಗಳನ್ನು ಮಾಡಿ ಎಡೆ ಇಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು (Puneeth Rajkumar Fans) ನೆಚ್ಚಿನ ನಟನ ಸ್ಮಾರಕಕ್ಕೆ ನಮನ ಸಲ್ಲಿಸುತ್ತಿದ್ದಾರೆ. ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಸರದಿ ಸಾಲಿನಲ್ಲಿ ನಿಂತು ಅಭಿಮಾನ ತೋರುತ್ತಿದ್ದಾರೆ. ಅಪ್ಪು ಸ್ಮಾರಕದ ಬಳಿ ಅಭಿಮಾನಿಗಳ ದಂಡು ನೆರೆದಿದೆ. ಮುಂಜಾನೆಯಿಂದ ರಾತ್ರಿ ತನಕ ಹಲವು ಬಗೆಯ ಕಾರ್ಯಗಳು ನಡೆಯಲಿವೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಎಲ್ಲದರ ಲೈವ್​ ವಿಡಿಯೋ ಇಲ್ಲಿದೆ..

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.