ಪುನೀತ್ ರಾಜ್ಕುಮಾರ್ ಜನ್ಮದಿನದ ಪ್ರಯುಕ್ತ 202 ಕಿ.ಮೀ. ಸೈಕಲ್ ಜಾಥಾ ಹೊರಟ ಅಪ್ಪು ಫ್ಯಾನ್ಸ್
ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಆಚರಿಸಲು ಐಸೈಕಲ್ ತಂಡದವರು ಗಾಜನೂರಿಗೆ ತೆರಳುತ್ತಿದ್ದಾರೆ. ಬೆಂಗಳೂರಿನಿಂದ ಸೈಕಲ್ ಜಾಥಾ ಆರಂಭ ಆಗಿದೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಜನ್ಮದಿನ (ಮಾ.17) ಆಚರಿಸಲು ಅಭಿಮಾನಿಗಳು ಹಲವು ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅಪ್ಪು ಹೆಸರನ್ನು ಅಮರವಾಗಿಸಲು ಜನರು ಒಂದಿಲ್ಲೊಂದು ಕಾರ್ಯಗಳನ್ನು ಮಾಡುತ್ತಲೇ ಇದ್ದಾರೆ. ಪುನೀತ್ ರಾಜ್ಕುಮಾರ್ ಅವರಿಗೆ ಸೈಕಲ್ ಬಗ್ಗೆ ವಿಶೇಷ ಆಸಕ್ತಿ ಇತ್ತು. ಬಿಡುವಿನ ಸಂದರ್ಭದಲ್ಲಿ ಅವರು ಸೈಕಲ್ ಸವಾರಿ ಮಾಡುತ್ತಿದ್ದರು. ಈಗ ‘ಪವರ್ ಸ್ಟಾರ್’ ಅಭಿಮಾನಿಗಳು (Puneeth Rajkumar Fans) ಬರೋಬ್ಬರಿ 202 ಕಿಲೋಮೀಟರ್ ಸೈಕಲ್ ಜಾಥಾ ಮಾಡುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಸಮಾಧಿಯಿಂದ ಡಾ. ರಾಜ್ಕುಮಾರ್ ಹುಟ್ಟೂರಾದ ಗಾಜನೂರಿನವರೆಗೆ ಈ ಜಾಥಾ ನಡೆಯಲಿದೆ. ಐಸೈಕಲ್ ತಂಡದ 20ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿ ಆಗಿದ್ದಾರೆ. ಬುಧವಾರ (ಮಾ.16) ಜಾಥಾಗೆ ಚಾಲನೆ ನೀಡಲಾಗಿದೆ. ಮೊದಲ ದಿನ 112 ಕಿಮೀ ದೂರ ಕ್ರಮಿಸಲಿದ್ದು, ಗುರುವಾರ ಮಳವಳ್ಳಿಯಿಂದ ಗಾಜನೂರಿನವರೆಗೆ 90 ಕಿಮೀ ಸೈಕಲ್ ಜಾಥಾ ಆಗಲಿದೆ. ಗಾಜನೂರಿನಲ್ಲಿ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ (Puneeth Rajkumar Birthday) ಆಚರಿಸಲು ಐಸೈಕಲ್ ತಂಡದವರು ತೆರಳುತ್ತಿದ್ದಾರೆ.
ಇದನ್ನೂ ಓದಿ:
‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ
ಕೊಪ್ಪಳದಲ್ಲಿ ಪುನೀತ್ ರಾಜ್ಕುಮಾರ್ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಅಭಿಮಾನಿಗಳು