‘ಅಂಜನಿಪುತ್ರ’, ‘ಪವರ್​’ ಒಂದೇ ದಿನ ಮರು ಬಿಡುಗಡೆ ಆಗಿದ್ದಕ್ಕೆ ಅಪ್ಪು ಫ್ಯಾನ್ಸ್​ ಬೇಸರ

| Updated By: ಮದನ್​ ಕುಮಾರ್​

Updated on: May 10, 2024 | 7:07 PM

‘ಅಪ್ಪು ಬಾಸ್​ ನಟನೆಯ ಎರಡು, ಮೂರು ಸಿನಿಮಾಗಳನ್ನು ಒಂದೇ ದಿನ ರಿಲೀಸ್​ ಮಾಡಬೇಡಿ ಅಂತ ನಾವು ನಿರ್ಮಾಪಕರ ಬಳಿ ಮನವಿ ಮಾಡಿಕೊಳ್ಳುತ್ತೇವೆ. ಪ್ರತಿಯೊಂದು ಸಿನಿಮಾವನ್ನು ಸೂಕ್ತ ಸಂದರ್ಭದಲ್ಲಿ ಮರು ಬಿಡುಗಡೆ ಮಾಡಿ’ ಎಂದು ಫ್ಯಾನ್ಸ್​ ಹೇಳಿದ್ದಾರೆ. ‘ಅಂಜನಿಪುತ್ರ’ ಹಾಗೂ ‘ಪವರ್​’ ಚಿತ್ರಗಳು ಒಂದೇ ದಿನ ಮರು ಬಿಡುಗಡೆ ಆಗಿದ್ದಕ್ಕೆ ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿಗಳಿಗೆ ಬೇಸರವಾಗಿದೆ.

ಪುನೀತ್​ ರಾಜ್​ಕುಮಾರ್​ (Puneeth Rajkumar) ನಟನೆಯ ‘ಅಂಜನಿಪುತ್ರ’ ಹಾಗೂ ‘ಪವರ್​’ ಸಿನಿಮಾಗಳು ಇಂದು (ಮೇ 10) ಮರು ಬಿಡುಗಡೆ ಆಗಿವೆ. ಒಂದೇ ದಿನ ಎರಡೂ ಸಿನಿಮಾಗಳು ಮರು ಬಿಡುಗಡೆ ಆಗಿದ್ದಕ್ಕೆ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬೇರೆ ಬೇರೆ ದಿನಾಂಕದಲ್ಲಿ ಈ ಸಿನಿಮಾಗಳನ್ನು ರೀ-ರಿಲೀಸ್​ ಮಾಡಿದ್ದರೆ ಸೂಕ್ತವಾಗಿ ಇರುತ್ತಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ. ಈ ಕುರಿತು ‘ಟಿವಿ 9 ಕನ್ನಡ’ಕ್ಕೆ ಅಭಿಮಾನಿಗಳು (Puneeth Rajkumar Fans) ಪ್ರತಿಕ್ರಿಯೆ ನೀಡಿದ್ದಾರೆ. ‘ಒಂದೇ ದಿನ ಎರಡು ಸಿನಿಮಾದ ಮರು ಬಿಡುಗಡೆ ಬೇಕಿರಲಿಲ್ಲ. ಇದು ಪುನೀತ್​ ರಾಜ್​ಕುಮಾರ್​ ಅವರ ಹೆಸರಿಗೆ ಮಾಡಿದ ಅವಮಾನ. ಜನ್ಮದಿನ, ಪುಣ್ಯಸ್ಮರಣೆ ರೀತಿಯ ವಿಶೇಷ ದಿನದಲ್ಲಿ ಮರು ಬಿಡುಗಡೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಆಗ ಹಬ್ಬದ ರೀತಿ ಸೆಲೆಬ್ರೇಟ್​ ಮಾಡುತ್ತಿದ್ದೆವು. ಈಗ ಹೆಚ್ಚು ಜನರು ಸಿನಿಮಾ ನೋಡಲು ಬರುತ್ತಿಲ್ಲ. ಇದನ್ನು ನೋಡಿದಾಗ ಬೇಸರ ಆಗುತ್ತದೆ. ಎಷ್ಟೋ ಜನರಿಗೆ ಮರು ಬಿಡುಗಡೆ ಆಗಿರುವುದು ಗೊತ್ತಿಲ್ಲ. ಇದರಿಂದ ಫ್ಯಾನ್ಸ್​ಗೆ ತುಂಬ ಬೇಸರ ಆಗುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರು ಇಲ್ಲ ಅಂತ ನಾವು ಅಂದುಕೊಂಡಿಲ್ಲ. ಅವರ ಸಿನಿಮಾಗಳನ್ನು ನೋಡುವ ಮೂಲಕ ಈಗಲೂ ಅವರು ಇದ್ದಾರೆ ಅಂತ ನಾವು ಅಂದುಕೊಂಡಿದ್ದೇವೆ’ ಎಂದು ಅಪ್ಪು ಅಭಿಮಾನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.