ಅಪ್ಪು ಸಮಾಧಿ ಮುಂದೆ ಅತ್ತು ಗೋಳಾಡಿದ ಮಹಿಳೆ; ಅಭಿಮಾನಿಗಳ ನೋವಿಗೆ ಈ ವಿಡಿಯೋ ಸಾಕ್ಷಿ

ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಇತ್ತೀಚೆಗೆ ಭೇಟಿ ನೀಡಿದ ಮಹಿಳೆಯೊಬ್ಬರು ಅತ್ತು ಗೋಳಾಡಿದ ದೃಶ್ಯ ಮನ ಕಲಕುವಂತಿದೆ. ಅಭಿಮಾನಿಗಳಿಗೆ ಅಪ್ಪು ನಿಧನದ ನೋವನ್ನು ಸಹಿಸಲಾಗುತ್ತಿಲ್ಲ.

ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನರಾಗಿ 17 ದಿನ ಕಳೆದಿದೆ. ಹಾಗಿದ್ದರೂ ಕೂಡ ಅಭಿಮಾನಿಗಳ ಎದೆಯಲ್ಲಿ ದುಃಖ ಕಡಿಮೆ ಆಗಿಲ್ಲ. ಅಪ್ಪು ಸಮಾಧಿ (Puneeth Rajkumar Samadhi) ದರ್ಶನಕ್ಕೆ ಪ್ರತಿ ದಿನ ಸಾವಿರಾರು ಜನರು ಬರುತ್ತಲೇ ಇದ್ದಾರೆ. ನೆಚ್ಚಿನ ನಟನ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಕೆಲವರಂತೂ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಕಂಡುಬರುತ್ತಲೇ ಇದೆ. ವಿಶೇಷವಾಗಿ ಮಹಿಳಾ ಅಭಿಮಾನಿಗಳು (Puneeth Rajkumar Fans) ಅಪ್ಪುಗಾಗಿ ತೀವ್ರ ಥರದಲ್ಲಿ ಕಣ್ನೀರ ಕೋಡಿ ಹರಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋ (Kanteerava Studio) ಆವರಣದಲ್ಲಿ ಇರುವ ಪುನೀತ್​ ಸಮಾಧಿಗೆ ಇತ್ತೀಚೆಗೆ ಭೇಟಿ ನೀಡಿದ ಮಹಿಳೆಯೊಬ್ಬರು ಅತ್ತು ಗೋಳಾಡಿದ ದೃಶ್ಯ ಮನ ಕಲಕುವಂತಿದೆ.

ಅನೇಕ ಸೆಲೆಬ್ರಿಟಿಗಳು ಕೂಡ ಪುನೀತ್​ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಪರಭಾಷೆಯ ಸ್ಟಾರ್​ ಕಲಾವಿದರು ಪುನೀತ್​ ಕುಟುಂಬದವರಿಗೆ ಸಾಂತ್ವನ ಹೇಳಲು ಬೆಂಗಳೂರಿಗೆ ಬಂದುಹೋಗುತ್ತಿದ್ದಾರೆ. ಈ ನಡುವೆ ಪುನೀತ್ ರಾಜ್​ಕುಮಾರ್ ಅವರ ಹಳೇ ವಿಡಿಯೋಗಳು ವೈರಲ್​ ಆಗುತ್ತಿವೆ. ಅವರು ಕಳೆದ ವರ್ಷ ದೀಪಾವಳಿ ಹಬ್ಬ ಮತ್ತು ಮಕ್ಕಳ ದಿನಾಚರಣೆಗೆ ವಿಶ್​ ಮಾಡಿದ್ದ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅವುಗಳನ್ನು ಕಂಡು ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ನ.16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರರಂಗದ ವತಿಯಿಂದ ‘ಪುನೀತ್ ನಮನ’ ಕಾರ್ಯಕ್ರಮ ನಡೆದಯಲಿದೆ.

ಇದನ್ನೂ ಓದಿ:

ಮಕ್ಕಳ ದಿನಾಚರಣೆಗೆ ಪುನೀತ್​ ವಿಶ್​; ವೈರಲ್​ ಆದ ಹಳೇ ವಿಡಿಯೋ ಕಂಡು ಫ್ಯಾನ್ಸ್​​ ಭಾವುಕ

Rachita Ram: ವೇದಿಕೆ ಮೇಲೆ ಪುನೀತ್​ಗೆ ಅವಮಾನ: ಕ್ಷಮೆ ಕೇಳಿದ ರಚಿತಾ ರಾಮ್​ ಈಗ ನೀಡಿದ ಸಮಜಾಯಿಷಿ ಏನು?

Click on your DTH Provider to Add TV9 Kannada