ಮಕ್ಕಳ ದಿನಾಚರಣೆಗೆ ಪುನೀತ್​ ವಿಶ್​; ವೈರಲ್​ ಆದ ಹಳೇ ವಿಡಿಯೋ ಕಂಡು ಫ್ಯಾನ್ಸ್​​ ಭಾವುಕ

Children's Day 2021: ಪುನೀತ್​ ರಾಜ್​ಕುಮಾರ್​ ಅವರ ಹಳೆಯ ವಿಡಿಯೋಗಳು ಇಂದಿನ ಸಂದರ್ಭಕ್ಕೆ ಅನುಗುಣವಾಗಿ ವೈರಲ್​ ಆಗುತ್ತಿವೆ. ಮಕ್ಕಳ ದಿನಾಚರಣೆಗೆ ಅವರು ವಿಶ್​ ಮಾಡಿದ್ದ ವಿಡಿಯೋ ಕೂಡ ಇಂದು (ನ.14) ಸಖತ್​ ವೈರಲ್​ ಆಗುತ್ತಿದೆ.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಹೃದಯಾಘಾತದಿಂದ ಮೃತಪಟ್ಟಿದ್ದನ್ನು ಸಹಿಸಿಕೊಳ್ಳುವುದು ಕಷ್ಟ. ಜನರು ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಪುನೀತ್​ ಅವರು ನಮ್ಮ ಕಣ್ಣಮುಂದೆ ಬರುತ್ತಾರೆ. ಅವರ ಹಳೆಯ ವಿಡಿಯೋಗಳು ಇಂದಿನ ಸಂದರ್ಭಕ್ಕೆ ಅನುಗುಣವಾಗಿ ವೈರಲ್​ ಆಗುತ್ತಿವೆ. ಕಳೆದ ವರ್ಷ ಅವರು ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ್ದ ವಿಡಿಯೋ ವೈರಲ್​ ಆಗಿತ್ತು. ಅದೇ ರೀತಿ, ಅವರು ಮಕ್ಕಳ ದಿನಾಚರಣೆಗೆ (Children’s Day) ವಿಶ್​ ಮಾಡಿದ್ದ ವಿಡಿಯೋ ಕೂಡ ಇಂದು (ನ.14) ಸಖತ್​ ವೈರಲ್​ ಆಗುತ್ತಿದೆ. ಅದನ್ನು ನೋಡಿದಾಗ ಮತ್ತೆ ಅಪ್ಪು ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ.

ಅಪ್ಪು ಎಂದರೆ ಎಲ್ಲ ವಯಸ್ಸಿನವರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಪುನೀತ್​ ಹಾಡು ಮತ್ತು ಸಿನಿಮಾಗಳು ರುಚಿಸುತ್ತಿದ್ದವು. ಪುನೀತ್​ ನಿಧನರಾದರು ಎಂಬ ಸುದ್ದಿ ಗೊತ್ತಾಗಾದ ಅನೇಕ ಮಕ್ಕಳು ಕಣ್ಣೀರು ಹಾಕಿದ ಬಗ್ಗೆ ವರದಿ ಆಗಿತ್ತು. ಅಪ್ಪು ಮೇಲೆ ಅವರು ಇಟ್ಟಿದ್ದ ಅಭಿಮಾನ, ಪ್ರೀತಿಗೆ ಆ ಕಣ್ಣೀರು ಸಾಕ್ಷಿ. ಅದೇ ರೀತಿ ವೃದ್ಧರಿಗೂ ಪುನೀತ್​ ಎಂದರೆ ಅಚ್ಚುಮೆಚ್ಚು. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕುಕನೂರು ಬಸ್​ ನಿಲ್ದಾಣದಲ್ಲಿ ವೃದ್ಧೆಯೊಬ್ಬರು ಪುನೀತ್ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ವಿಡಿಯೋ ಸಹ ವೈರಲ್​ ಆಗಿತ್ತು.

ಇದನ್ನು ಓದಿ:

Rachita Ram: ವೇದಿಕೆ ಮೇಲೆ ಪುನೀತ್​ಗೆ ಅವಮಾನ: ಕ್ಷಮೆ ಕೇಳಿದ ರಚಿತಾ ರಾಮ್​ ಈಗ ನೀಡಿದ ಸಮಜಾಯಿಷಿ ಏನು?

ಅಪ್ಪು ಫೋಟೋ ಮುಂದೆ ಶಾಂಪೇನ್​ ವಿವಾದ: ‘ಇದು ಇಷ್ಟು ದೊಡ್ಡದು ಆಗುತ್ತೆ ಅಂತ ಗೊತ್ತಿರಲಿಲ್ಲ’: ಪ್ರೇಮ್​ ಪ್ರತಿಕ್ರಿಯೆ

Click on your DTH Provider to Add TV9 Kannada