ಅಪ್ಪು ಪುಣ್ಯಸ್ಮರಣೆ: ಹೂಗಳಿಂದ ಅಲಂಕೃತಗೊಂಡಿದೆ ಅಪ್ಪು ಸಮಾಧಿ
ಅಪ್ಪು

ಅಪ್ಪು ಪುಣ್ಯಸ್ಮರಣೆ: ಹೂಗಳಿಂದ ಅಲಂಕೃತಗೊಂಡಿದೆ ಅಪ್ಪು ಸಮಾಧಿ

|

Updated on: Oct 29, 2023 | 7:52 AM

Puneeth Rajkumar: ಪುನೀತ್ ರಾಜ್​ಕುಮಾರ್ ಇಹಲೋಕ ತ್ಯಜಿಸಿ ಇಂದಿಗೆ (ಅಕ್ಟೋಬರ್ 29) ಎರಡು ವರ್ಷವಾಯಿತು. ಹೃದಯಾಘಾತದಿಂದ ಅಪ್ಪು ನಿಧನ ಹೊಂದಿದರು. ಇಂದು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ. ಕಂಠೀರವ ಸ್ಟುಡಿಯೋದಲ್ಲಿನ ಅವರ ಸಮಾಧಿ ಸ್ಥಳವನ್ನು ಹೂವುಗಳಿಂದ ಅಲಂಕರಿಸಲಾಗಿದೆ.

ಇಂದು (ಅಕ್ಟೋಬರ್ 29) ಕನ್ನಡ ಚಿತ್ರಪ್ರೇಮಿಗಳ ಪಾಲಿಗೆ ಕರಾಳ ದಿನ. ಪುನೀತ್ ರಾಜ್​ಕುಮಾರ್ (Puneeth Rajkumar) ಇಹಲೋಕ ತ್ಯಜಿಸಿ ಇಂದಿಗೆ ಎರಡು ವರ್ಷ. ಎರಡು ವರ್ಷಗಳಾದರೂ ಅಭಿಮಾನಿಗಳ ನೋವು, ಕಂಬನಿಗಳು ಆರಿಲ್ಲ. ಅಪ್ಪುವನ್ನು ನೆನೆಯದ ದಿನವಿಲ್ಲ. ಇಂದು ಅಪ್ಪು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯ ದಿನದಂದು ಕಂಠೀರವ ಸ್ಟುಡಿಯೋದಲ್ಲಿನ ಅವರ ಸಮಾಧಿ ಸ್ಳವನ್ನು ಹೂಗಳಿಂದ ಸಿಂಗರಿಸಲಾಗಿದೆ. ನಿನ್ನೆಯೇ ಹಲವು ಅಲಂಕಾರಿಕ ಕಾರ್ಯಗಳು, ಆಗಮಿಸುವವರ ಅನುಕೂಲಕ್ಕೆ ವ್ಯವಸ್ಥೆಗಳು ಎಲ್ಲವೂ ನಡೆದಿವೆ. ಅಣ್ಣಾವ್ರ ಸಮಾಧಿ ಸ್ಥಳವನ್ನೂ ಹೂಗಳಿಂದ ಅಲಂಕರಿಸಲಾಗಿದೆ. ಇಡೀ ರಸ್ತೆಯನ್ನು ದೀಪಗಳಿಂದ ಸಿಂಗರಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ