Puneeth Rajkumar: ಪುನೀತ್ ಸಮಾಧಿ ಬಳಿ ಕುಸಿದು ಬಿದ್ದ ಗನ್ ಮ್ಯಾನ್ ಪುತ್ರಿ; ಮರೆಯಲಾಗುತ್ತಿಲ್ಲ ಅಪ್ಪು ಅಗಲಿಕೆಯ ನೋವು
ಪತ್ನಿ ಅಶ್ವಿನಿ, ಪುತ್ರಿಯರಾದ ವಂದಿತಾ, ಧೃತಿ, ಸಹೋದರ ಶಿವರಾಜ್ಕುಮಾರ್ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಪ್ರತಿ ಕ್ಷಣ ಕಂಬನಿ ಸುರಿಸುತ್ತಿದ್ದಾರೆ. ಹಾಲು ತುಪ್ಪ ಬಿಡುವ ವೇಳೆ ಪುನೀತ್ ಅವರ ಗನ್ ಮ್ಯಾನ್ ಪುತ್ರಿ ಕುಸಿದು ಬಿದ್ದ ಘಟನೆಯೂ ನಡೆಯಿತು.
ನಟ ಪುನೀತ್ ರಾಜ್ಕುಮಾರ್ ಅವರು ಹೀಗೆ ಅಕಾಲಿಕ ಮರಣಕ್ಕೆ ಒಳಗಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ನಿಧನದ ನೋವನ್ನು ಮರೆಯಲಾಗುತ್ತಿಲ್ಲ. ಅಪ್ಪು ಇಹಲೋಕ ತ್ಯಜಿಸಿ 5 ದಿನ ಕಳೆದಿದೆ. ಇಂದು (ನ.2) ಪುನೀತ್ ಸಮಾಧಿಗೆ ಕುಟುಂಬದವರು ಹಾಲು ತುಪ್ಪ ಬಿಟ್ಟಿದ್ದಾರೆ. ಪತ್ನಿ ಅಶ್ವಿನಿ, ಪುತ್ರಿಯರಾದ ವಂದಿತಾ, ಧೃತಿ, ಸಹೋದರ ಶಿವರಾಜ್ಕುಮಾರ್ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಪ್ರತಿ ಕ್ಷಣ ಕಂಬನಿ ಸುರಿಸುತ್ತಿದ್ದಾರೆ. ಹಾಲು ತುಪ್ಪ ಬಿಡುವ ವೇಳೆ ಪುನೀತ್ ಅವರ ಗನ್ ಮ್ಯಾನ್ ಪುತ್ರಿ ಕುಸಿದು ಬಿದ್ದ ಘಟನೆಯೂ ನಡೆಯಿತು. ಚಿನ್ನದಂತಹ ವ್ಯಕ್ತಿತ್ವ ಹೊಂದಿದ್ದ ಅಪ್ಪು ಅವರ ನಿಧನದ ಸತ್ಯವನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಪಾರ ಸಂಖ್ಯೆಯ ಅಭಿಮಾನಿಗಳು ದೂರದ ಊರುಗಳಿಂದ ಬಂದು ಸಮಾಧಿ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಶೀಘ್ರದಲ್ಲೇ ಅವಕಾಶ ಕೊಡುತ್ತೇವೆ ಎಂದು ರಾಜ್ ಕುಟುಂಬದವರು ಹೇಳಿದ್ದಾರೆ. ಕಂಠೀರವ ಸ್ಟುಡಿಯೋ ಎದುರು ಬಂದು ಕಾಯುತ್ತಿರುವ ಪುನೀತ್ ಅಭಿಮಾನಿಗಳ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ:
ಪುನೀತ್ ನಿಧನಕ್ಕೂ 15-20 ನಿಮಿಷ ಮುನ್ನ ನಿಜಕ್ಕೂ ಏನು ನಡೆಯಿತು? ಇಲ್ಲಿದೆ ಕಾರು ಚಾಲಕ ತೆರೆದಿಟ್ಟ ವಿವರ
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಅವ್ನೇ ಬೇಕೆಂದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ

