ಪುನೀತ್​ ನಿಧನಕ್ಕೂ 15-20 ನಿಮಿಷ ಮುನ್ನ ನಿಜಕ್ಕೂ ಏನು ನಡೆಯಿತು? ಇಲ್ಲಿದೆ ಕಾರು ಚಾಲಕ ತೆರೆದಿಟ್ಟ ವಿವರ

Puneeth Rajkumar: ಅ.29ರ ಬೆಳಗ್ಗೆ ಪುನೀತ್​ ರಾಜ್​ಕುಮಾರ್​ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಆ ಸಮಯದಲ್ಲಿ ಅವರ ಜೊತೆಯಲ್ಲಿ ಇದ್ದವರು ಕೆಲವೇ ಕೆಲವು ಮಂದಿ ಮಾತ್ರ. ಆ ಪೈಕಿ ಕಾರು ಚಾಲಕ ಬಾಬು ಕೂಡ ಒಬ್ಬರು.

ಪುನೀತ್​ ನಿಧನಕ್ಕೂ 15-20 ನಿಮಿಷ ಮುನ್ನ ನಿಜಕ್ಕೂ ಏನು ನಡೆಯಿತು? ಇಲ್ಲಿದೆ ಕಾರು ಚಾಲಕ ತೆರೆದಿಟ್ಟ ವಿವರ
ಪುನೀತ್​ ರಾಜ್​ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 02, 2021 | 3:20 PM

ಫಿಟ್ನೆಸ್ ಬಗ್ಗೆ​ ಅತಿ ಹೆಚ್ಚು ಕಾಳಜಿ ವಹಿಸುತ್ತಿದ್ದ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಹೃದಯಾಘಾತ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಕಾಡುತ್ತಿದೆ. ಅ.29ರಂದು ಇಡೀ ಕರುನಾಡಿನ ಪಾಲಿಗೆ ಕರಾಳ ದಿನ. ಅಂದು ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ಪುನೀತ್​ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು ಎಂಬ ಮಾಹಿತಿ ಕೇಳಿಬಂತು. ಅದಾದ ಬಳಿಕ ಅವರ ಜೊತೆಯಲ್ಲಿ ಇದ್ದವರು ಕೆಲವೇ ಕೆಲವು ಮಂದಿ ಮಾತ್ರ. ಆ ಪೈಕಿ ಕಾರು ಚಾಲಕ ಬಾಬು ಕೂಡ ಒಬ್ಬರು. ಅಂದು ನಿಜಕ್ಕೂ ಏನಾಯ್ತು ಎಂಬುದನ್ನು ಅವರು ವಿವರಿಸಿದ್ದಾರೆ.

ಮನೆಯಲ್ಲಿದ್ದಾಗ ಪುನೀತ್​ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆ ಘಟನೆಯ ಸಿಸಿಟಿವಿ ದೃಶ್ಯ ಕೂಡ ಲಭ್ಯವಾಗಿದೆ. ಆ ಸಂದರ್ಭದ ಬಗ್ಗೆ ಕಾರು ಚಾಲಕ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ‘ಐದೇ ನಿಮಿಷದಲ್ಲೇ ಮನೆಯಿಂದ ಆಸ್ಪತ್ರೆಗೆ ಹೋಗಿದ್ದೆವು. ಡಾ. ರಮಣ ರಾವ್​ ಅವರ ಕ್ಲಿನಿಕ್​ಗೆ ಹೋಗಿದ್ದೆವು. ಕಾರಿನಲ್ಲಿ ಹೋಗುವಾಗಲೂ ಪುನೀತ್​ ಅವರು ಮೊಬೈಲ್​ನಲ್ಲಿ ಮಾತಾಡುತ್ತಿದ್ದರು. ‘ಭಜರಂಗಿ 2’ ಸಿನಿಮಾದ ರೆಸ್ಪಾನ್ಸ್ ಬಗ್ಗೆ ಫಿಲ್ಮ್ ಡಿಸ್ಟ್ರಿಬ್ಯೂಟರ್ ಮಂಜುನಾಥ್ ಜತೆ ಮಾತಾಡ್ತಿದ್ರು’ ಎಂದು ಬಾಬು ಹೇಳಿದ್ದಾರೆ.

‘ಡಾ. ರಮಣ ರಾವ್ ಕ್ಲಿನಿಕ್​ನಿಂದ ಕೇವಲ 10 ನಿಮಿಷಕ್ಕೆ ವಿಕ್ರಂ ಆಸ್ಪತ್ರೆ ಹೋದೆವು. ಅಲ್ಲಿಗೆ ತಲುಪುವಷ್ಟರಲ್ಲಿ ಪುನೀತ್ ಸುಸ್ತಾಗಿಬಿಟ್ಟಿದ್ದರು’ ಎಂದು ಬಾಬು ವಿವರಿಸಿದ್ದಾರೆ. ಅಂದರೆ ನಿಧನರಾಗುವುದಕ್ಕೂ 15-20 ನಿಮಿಷಗಳ ಮುನ್ನ ಪುನೀತ್​ ಚೆನ್ನಾಗಿ ಇದ್ದರು. ಅಣ್ಣ ಶಿವರಾಜ್​ಕುಮಾರ್​ ನಟನೆಯ ಸಿನಿಮಾಗೆ ಯಾವ ರೀತಿಯ ರೆಸ್ಪಾನ್ಸ್​ ಸಿಗುತ್ತಿದೆ ಎಂಬುದನ್ನು ಫೋನ್​ ಮಾಡಿ ತಿಳಿದುಕೊಳ್ಳುವಷ್ಟರಮಟ್ಟಿಗೆ ಅವರು ಆ್ಯಕ್ಟೀವ್​ ಆಗಿದ್ದರು. ಆದರೆ ಏಕಾಏಕಿ ಸಾವು ಸಂಭವಿಸಿದ್ದು ಮಾತ್ರ ವಿಪರ್ಯಾಸ.

ಪುನೀತ್​ ನಿಧನರಾಗಿ 5 ದಿನ ಕಳೆದಿದೆ. ಆ ಪ್ರಯುಕ್ತ ಡಾ. ರಾಜ್​ಕುಮಾರ್​ ಕುಟುಂಬದವರು ಕಂಠೀರವ ಸ್ಡುಡಿಯೋದಲ್ಲಿ ಇರುವ ಅಪ್ಪು ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನೆರವೇರಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ದೂರದ ಊರುಗಳಿಂದ ಬಂದು ಸಮಾಧಿ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಶೀಘ್ರದಲ್ಲೇ ಅವಕಾಶ ಕೊಡುತ್ತೇವೆ ಎಂದು ರಾಜ್​ ಕುಟುಂಬದವರು ಹೇಳಿದ್ದಾರೆ. ಕಂಠೀರವ ಸ್ಟುಡಿಯೋ ಎದುರು ಬಂದು ಕಾಯುತ್ತಿರುವ ಪುನೀತ್​ ಅಭಿಮಾನಿಗಳ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ:

Puneeth Rajkumar: ‘ಪುನೀತ್​ ಅತಿಯಾಗಿ ಜಿಮ್​ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ

Puneeth Rajkumar: ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ವ್ಯಕ್ತಿ ಅರೆಸ್ಟ್​; ಸೈಬರ್​ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ