‘ಯುವ ಸಿನಿಮಾ ಆಗಿದ್ದೇ ಅವರಿಂದ’; ಪುನೀತ್ ಬಗ್ಗೆ ಯುವ ಮಾತು

Updated on: Mar 27, 2024 | 8:34 AM

‘ಯುವ’ ಸಿನಿಮಾ ಮಾರ್ಚ್ 29ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯುವ ನಟನೆಯ ಮೊದಲ ಸಿನಿಮಾ. ಈ ಚಿತ್ರ ಆಗಿದ್ದೇ ಪುನೀತ್ ಅವರಿಂದ ಎಂದಿದ್ದಾರೆ ಯುವ.

‘ಯುವ’ ಸಿನಿಮಾ (Yuva Movie) ಮಾರ್ಚ್ 29ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯುವ ನಟನೆಯ ಮೊದಲ ಸಿನಿಮಾ. ಈ ಚಿತ್ರ ಆಗಿದ್ದೇ ಪುನೀತ್ ಅವರಿಂದ ಎಂದಿದ್ದಾರೆ ಯುವ. ಅಷ್ಟೇ ಅಲ್ಲ, ಪುನೀತ್ ಅವರ ಜೊತೆ ಕೆಲಸ ಮಾಡಿದ ತಂಡ ತಮಗೆ ಸಿಕ್ಕಿದ್ದಕ್ಕೆ ಅವರು ಖುಷಿ ಆಗಿದ್ದಾರೆ. ‘ಯುವ’ ಸಿನಿಮಾಗೆ ನಿರ್ದೇಶನ ಮಾಡಿರುವ ಸಂತೋಷ್ ಆನಂದ್​ರಾಮ್ ಈ ಮೊದಲು ಪುನೀತ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರವನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ತಮ್ಮ ಜರ್ನಿ ಆರಂಭಿಸಿದ್ದೇ ಪುನೀತ್ ಸಿನಿಮಾದಿಂದ. ಹೀಗಾಗಿ, ಯುವ ಸಖತ್ ಖುಷಿ ಆಗಿದ್ದಾರೆ. ಈ ಚಿತ್ರಕ್ಕೆ ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ. ಕಾಲೇಜ್ ಕಥೆಯನ್ನು ಇದು ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More