ಮೈಸೂರು ಜಾತ್ರೆಯಲ್ಲಿ ಎತ್ತಿನ ಕೊಂಬುಗಳಲ್ಲಿ ಮಿಂಚಿದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್; ವಿಡಿಯೋ ಇಲ್ಲಿದೆ

Edited By:

Updated on: Apr 02, 2022 | 8:48 AM

ಬಲೂನ್ ಜೊತೆ ಅಪ್ಪು ಭಾವಚಿತ್ರ ಹಾಕಲಾಗಿದೆ. ಜಾತ್ರೆ ನೋಡಲು ಸಾವಿರಾರು ಭಕ್ತರ ದಂಡು ಆಗಮಿಸಿದೆ. ಕಳೆದ ಬಾರಿ ಕೊರೊನಾ ಹಿನ್ನೆಲೆ ಐತಿಹಾಸಿಕ ಜಾತ್ರೆ ಸ್ಥಗಿತವಾಗಿತ್ತು.

ಮೈಸೂರು: ಇಂದು ಯುಗಾದಿ (Ugadi) ಹಬ್ಬ ಹಿನ್ನೆಲೆ ಮೈಸೂರಿನಲ್ಲಿ ಜಾತ್ರೆ ಸಂಭ್ರಮ ಜೋರಾಗಿದೆ. ಮೈಸೂರು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಭೈರಪ್ಪ ಬಂಡಿ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಯಲ್ಲಿ ಪವರ್ ಸ್ಟಾರ್ ಡಾ. ಪುನೀತ್ ರಾಜ್​ಕುಮಾರ್ (Puneeth Rajkumar) ಭಾವಚಿತ್ರ ರಾರಾಜಿಸಿದೆ. ಎತ್ತಿನ ಕೊಂಬುಗಳಲ್ಲಿ ಅಪ್ಪು ಮಿಂಚಿದ್ದಾರೆ. ಅಪ್ಪು ಭಾವಚಿತ್ರದ ಜೊತೆ ಜೋಡಿ ಎತ್ತುಗಳು ಸಾಗಿದೆ. ಬಲೂನ್ ಜೊತೆ ಅಪ್ಪು ಭಾವಚಿತ್ರ ಹಾಕಲಾಗಿದೆ. ಜಾತ್ರೆ ನೋಡಲು ಸಾವಿರಾರು ಭಕ್ತರ ದಂಡು ಆಗಮಿಸಿದೆ. ಕಳೆದ ಬಾರಿ ಕೊರೊನಾ ಹಿನ್ನೆಲೆ ಐತಿಹಾಸಿಕ ಜಾತ್ರೆ ಸ್ಥಗಿತವಾಗಿತ್ತು. ಆದರೆ ಈ ಬಾರಿ ಕೊರೊನಾ ನಿಯಂತ್ರಣದಲ್ಲಿರುವ ಕಾರಣ ಜಾತ್ರೆ ಅದ್ದೂರಿಯಾಗಿದೆ ಜರುಗಿದೆ. ಇನ್ನು ಜಾತ್ರೆಯಲ್ಲಿ ಸೇಬಿನ ಹಾರ ಹಾಕಿಕೊಂಡು ಸಾಗಿದ ಎತ್ತುಗಳು ಜನರ ಗಮನ ಸೆಳೆದಿವೆ.

ಇದನ್ನೂ ಓದಿ

ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾದ ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ: ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು

Karnataka Rain: ಕೊಡಗು- ಹುಣಸೂರು ಭಾಗದಲ್ಲಿ ಭಾರಿ ಮಳೆ; ಅಪಾರ ಬೆಳೆ ಹಾನಿ, ಮಹಿಳೆ ಸಾವು