ಅಪ್ಪು ಧ್ವನಿ ಮತ್ತೆ ಪಡೆಯಲು ಕಾರಣವಾದ ನಟ ಯಾರು? ಸುದ್ದಿಗೋಷ್ಠಿಯಲ್ಲಿ ವಿವರಿಸಿದ ‘ಜೇಮ್ಸ್’ ಡೈರೆಕ್ಟರ್ ಚೇತನ್
James Movie: ‘ಜೇಮ್ಸ್ ಸಿನಿಮಾದಲ್ಲಿ ಪುನೀತ್ ಧ್ವನಿ ಕೇಳಿದಾಗ ದೇವರ ಧ್ವನಿ ಕೇಳಿದಂತೆ ಆಯ್ತು’ ಎಂದಿದ್ದಾರೆ ನಿರ್ದೇಶಕ ಚೇತನ್ ಕುಮಾರ್. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ..
ಪುನೀತ್ ರಾಜ್ಕುಮಾರ್ (Puneeth Rajkumar) ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್’ನಲ್ಲಿ ಅವರ ಧ್ವನಿಯೇ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಚಿತ್ರತಂಡದಿಂದ ಗುಡ್ ನ್ಯೂಸ್ ನೀಡಲಾಗಿದೆ. ಈಗ ಹೊಸ ತಂತ್ರಜ್ಞಾನ ಬಳಸಿ ಪುನೀತ್ ರಾಜ್ಕುಮಾರ್ ಅವರ ಧ್ವನಿಯನ್ನೇ ‘ಜೇಮ್ಸ್’ (James Movie) ಸಿನಿಮಾಗೆ ನೀಡಲಾಗಿದೆ. ಹಾಗಾಗಿ ಏ.22ರಂದು ಈ ಚಿತ್ರ ಮರು ಬಿಡುಗಡೆ ಆಗುತ್ತಿದೆ. ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಚೇತನ್ ಕುಮಾರ್ (Chethan Kumar) ಮಾತನಾಡಿದ್ದಾರೆ. ಟಾಲಿವುಡ್ ನಟ ಶ್ರೀಕಾಂತ್ ಮೆಕಾ ಅವರು ಅತ್ಯುತ್ತಮ ಸೌಂಡ್ ಇಂಜಿನಿಯರ್ಸ್ ತಂಡವನ್ನು ಪರಿಚಯ ಮಾಡಿಸಿಕೊಟ್ಟಿದ್ದರಿಂದಲೇ ಇದೆಲ್ಲ ಸಾಧ್ಯವಾಯ್ತು ಎಂದು ಚೇತನ್ ವಿವರಿಸಿದ್ದಾರೆ. ಒಟ್ಟಾರೆ ಈ ಪ್ರಕ್ರಿಯೆ ಹೇಗೆ ನಡೆಯಿತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗಾಗಿ ಈ ಚಿತ್ರವನ್ನು ರೀ-ರಿಲೀಸ್ ಮಾಡಲಾಗುತ್ತಿದೆ.
ಇದನ್ನೂ ಓದಿ:
‘ನಮ್ಮ ಕೆಲಸ ನಿಲ್ಲಿಸಿ, ಮೊದಲು ಜೇಮ್ಸ್ ಚಿತ್ರದ ಕೆಲಸ ಮಾಡಿ’: ತಂತ್ರಜ್ಞರಿಗೆ ಪ್ರಭಾಸ್ ಹೇಳಿದ ಮಾತಿದು
ಪುನೀತ್ ರಾಜ್ಕುಮಾರ್ ಬ್ಯಾನರ್ ಸಲುವಾಗಿ ಫ್ಯಾನ್ಸ್ ಮತ್ತು ಗ್ರಾಮಸ್ಥರ ನಡುವೆ ಮಾರಾಮಾರಿ; ಏನಿದು ಕಿರಿಕ್?