ಪುನೀತ್ ರಾಜಕುಮಾರ್ ನೆನಪುಗಳು: ತಂದೆಯ ಹಾಗೆ ಅಪ್ಪು ಸಹ ಮಹಾ ದೈವಭಕ್ತರಾಗಿದ್ದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 01, 2021 | 10:51 PM

ಡಾ ರಾಜ್ ದೇವಸ್ಥಾನಗಳಿಗೆ ಹೋದಾಗ ಜನಸಾಮಾನ್ಯರಂತೆಯೇ ದರ್ಶನ ಪಡೆಯುತ್ತಿದ್ದರು. ತಮ್ಮ ಜನಪ್ರಿಯತೆ, ಖ್ಯಾತಿಯನ್ನು ಅವರು ಯಾವತ್ತೂ ಫೇವರ್ ಪಡೆಯಲು ಬಳಸಲಿಲ್ಲ. ಪುನೀತ್ ಸಹ ಹಾಗೆಯೇ ಮಾಡುತ್ತಿದ್ದರು.

ಕನ್ನಡ ಚಿತ್ರರಂಗವನ್ನು ಬಡವಾಗಿಸಿ ಬೇರೊಂದು ಲೋಕಕ್ಕೆ ತೆರಳಿರುವ ಪುನೀತ್ ರಾಜಕುಮಾರ ಬಹುಮುಖ ಪ್ರತಿಭೆಯ ವ್ಯಕ್ತಿಯಗಾಗಿದ್ದ ಹಾಗೆಯೇ ದೈವಭಕ್ತರೂ ಆಗಿದ್ದರು. ಬಿಡುವಾದಾಗಲೆಲ್ಲ ದೇವಸ್ಥಾನ ಮತ್ತು ಮಠಗಳಿಗೆ ಭೇಟಿ ನೀಡುತ್ತಿದ್ದರು. ಪುನೀತ್ ತಮ್ಮ ತಂದೆಯ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅವರಂತೆ ನಟನೆಯಲ್ಲಿ ಪ್ರಾವೀಣ್ಯತೆ, ಗಾಯನದಲ್ಲಿ ನೈಪುಣ್ಯತೆ ದೈವಭಕ್ತಿ ಮತ್ತು ಗುರುಹಿರಿಯರ ಬಗ್ಗೆ ಆದರ-ಗೌರದ ಮತ್ತು ಗುಣದಲ್ಲಿ ತುಂಬಿದ ಕೊಡ. ಕೇವಲ ರಾಜ್ಯದಲ್ಲಿರುವ ಗುಡಿ-ಗುಂಡಾರಗಳಲ್ಲದೆ, ದೇಶದ ನಾನಾಭಾಗಗಳ ದೇವಸ್ಥಾನಗಳಿಗೂ ಹೋಗಿ ಪೂಜೆಗಳನ್ನು ಸಲ್ಲಿಸಿದ್ದರು.

ಡಾ ರಾಜ್ ದೇವಸ್ಥಾನಗಳಿಗೆ ಹೋದಾಗ ಜನಸಾಮಾನ್ಯರಂತೆಯೇ ದರ್ಶನ ಪಡೆಯುತ್ತಿದ್ದರು. ತಮ್ಮ ಜನಪ್ರಿಯತೆ, ಖ್ಯಾತಿಯನ್ನು ಅವರು ಯಾವತ್ತೂ ಫೇವರ್ ಪಡೆಯಲು ಬಳಸಲಿಲ್ಲ. ಪುನೀತ್ ಸಹ ಹಾಗೆಯೇ ಮಾಡುತ್ತಿದ್ದರು. ಕುಟುಂಬದ ಮೂಲಗಳ ಪ್ರಕಾರ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಅವರ ಅರಾಧ್ಯ ದೈವ. ಹಲವಾರು ಬಾರಿ ಅವರು ಅಲ್ಲಿಗೆ ಹೋಗಿದ್ದರು.

ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಸಹ ಅಣ್ಣ ಶಿವರಾಜಕುಮಾರ ಜೊತೆ ಧರಿಸಿ ಇರುಮುಡಿ ಹೊತ್ತು ಸ್ವಾಮಿಯ ದರ್ಶನವನ್ನು 3-4 ಸಲ ಮಾಡಿಕೊಂಡು ಬಂದಿದ್ದರು.

ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೂ ಅವರು ಹಲವಾರು ಸಲ ಹೋಗಿಬಂದಿದ್ದರು. ಹಿಂದೆ ನಾವು, ಧಾರವಾಡದ ನುಗ್ಗೇಕೆರೆ ಹನುಮಾನ ದೇವಸ್ಥಾನದದ ಬಗ್ಗೆ ಚರ್ಚಿಸಿದ್ದೇವೆ. ಅಲ್ಲಿಗೂ ಪುನೀತ್ ಹೋಗಿದ್ದರಂತೆ. ಪ್ರತಿವರ್ಷ ಚಾಮುಂಡಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿ ದೇವಿಯ ದರ್ಶನ ಪಡೆಯುತ್ತಿದ್ದರು.

ಇದನ್ನೂ ಓದಿ:  SBI Pensioners Facility: ಪೆನ್ಷನ್​ದಾರರಿಗೆ ಎಸ್​ಬಿಐನಿಂದ ವಿಶೇಷ ವ್ಯವಸ್ಥೆ; ಈಗ ಸಲ್ಲಿಸಬಹುದು ವಿಡಿಯೋ ಜೀವಿತ ಪ್ರಮಾಣಪತ್ರ