ಶ್ರೀಗಂಧದಲ್ಲಿ ಪುನೀತ್ ರಾಜಕುಮಾರ ಮೂರ್ತಿ ಕೆತ್ತಿಸಿರುವ ಅಭಿಮಾನಿ ಅದನ್ನು ಅಶ್ವಿನಿ ಪುನೀತ್ ಅವರಿಗೆ ಉಡುಗೊರೆಯಾಗಿ ನೀಡಲಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 28, 2022 | 1:12 PM

ಹುಣಸೂರಿನ ಸ್ವರೂಪ್ ಶಿವಯ್ಯ ಹೆಸರಿನ ಅಭಿಮಾನಿ ಪುನೀತ್ ಪತ್ನಿ ಅಶ್ವಿನಿಯವರಿಗೆ ಉಡುಗೊರೆಯಾಗಿ ನೀಡಲು ಇದನ್ನು ಮಾಡಿಸಿದ್ದಾರೆ. ಹುಣಸೂರಿನ ಮುತ್ತು ಮಾರಮ್ಮ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

Mysuru: ಪುನೀತ್ ರಾಜಕುಮಾರ್ (Puneeth Rajkumar) ಅವರು ನಮ್ಮನ್ನಗಲಿ 9 ತಿಂಗಳು ಕಳೆದವು ಮಾರಾಯ್ರೇ. ಆದರೆ ಅಭಿಮಾನಿಗಳಿಗೆ ಅವರ ಮೇಲಿನ ಪ್ರೀತಿ ಒಂದಿಷ್ಟೂ ಕಡಿಮೆಯಾಗಿಲ್ಲ. ಈಗಲೂ ಕೂಡ ಸಾವಿರಾರು ಅಭಿಮಾನಿಗಳು ಪ್ರತಿನಿತ್ಯ ಅವರ ಸಮಾಧಿ ಭೇಟಿ ನೀಡಿ ನಮನ ಸಲ್ಲಿಸುತ್ತಾರೆ. ಶ್ರೀಗಂಧದಲ್ಲಿ (sandalwood) ಕೆತ್ತಿರುವ ಪುನೀತ್ ಅವರ ಈ ಪುತ್ಥಳಿ (bust) ನೋಡಿ. ಹುಣಸೂರಿನ ಸ್ವರೂಪ್ ಶಿವಯ್ಯ ಹೆಸರಿನ ಅಭಿಮಾನಿ ಪುನೀತ್ ಪತ್ನಿ ಅಶ್ವಿನಿಯವರಿಗೆ ಉಡುಗೊರೆಯಾಗಿ ನೀಡಲು ಇದನ್ನು ಮಾಡಿಸಿದ್ದಾರೆ. ಹುಣಸೂರಿನ ಮುತ್ತು ಮಾರಮ್ಮ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಅಂದಹಾಗೆ ಪುನೀತ್ ಮೂರ್ತಿಯನ್ನು ಕೆತ್ತಿದವರು ಮೈಸೂರಿನ ಕುಳಲಕರ್ಮಿಗಳಾದ ಅಶೋಕ್ ಮತ್ತು ರಂಜಿತ್. ಶಿವಯ್ಯ ಈ ಪುತ್ಥಳಿಗಾಗಿ ರೂ. 3 ಲಕ್ಷ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ:  Viral Video: ಬಾಯಲ್ಲಿ ನೀರು ಬರಿಸುವ ಐಸ್ ಕ್ರೀಮ್ ಸ್ಯಾಂಡ್ವಿಚ್! ಇಲ್ಲಿದೆ ನೋಡಿ ವಿಡಿಯೋ