ಪುಟಿನ್ ಭಯಂಕರ ಹಟಮಾರಿ, ಯುದ್ಧ ನಿಲ್ಲಿಸುವಂತೆ ಅವರ ಮನವೊಲಿಸುವುದು ಕಷ್ಟ: ಹೆಚ್ ಡಿ ದೇವೇಗೌಡ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 02, 2022 | 10:24 PM

ಮಾತುಕತೆಗೆ ಎದುರಾಗಿರುವ ಅತಿದೊಡ್ಡ ಸಮಸ್ಯೆಯೆಂದರೆ, ಪುಟಿನ್ ಭಯಂಕರ ಹಟಮಾರಿ ಎಂದು ದೇವೇಗೌಡರು ಹೇಳಿದರು. ಹಟಮಾರಿಗಳೊಂದಿಗೆ ಮಾತುಕತೆ ನಡೆಸಿ ಅವರನ್ನು ಒಪ್ಪಿಸುವುದು ಕಷ್ಟದ ಕೆಲಸ ಎಂದು ಅವರು ಹೇಳುತ್ತಾರೆ.

ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ (HD Devegowda) ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮಾತನ್ನ ಕನ್ನಡ ಭಾಷೆಯಲ್ಲಿ ಆರಂಭಿಸುವ ಜೆಡಿ(ಎಸ್) (JDS) ಪಕ್ಷದ ಪಿತಾಮಹ ಅವರು ಇಂಗ್ಲಿಷ್ ನಲ್ಲಿ ಮುಂದುವರಿಸಿಕೊಂಡು ಹೋಗಿ ಅದರಲ್ಲೇ ಕೊನೆಗೊಳಿಸುತ್ತಾರೆ. ಯುದ್ಧ ನಡೆಯುವ ಸಂದರ್ಭದಲ್ಲಿ ಒಂದೆರಡು ಬಿಸ್ಕತ್ತು ಸಿಗುವುದು ದುಸ್ತರವಾಗುತ್ತದೆ ಎಂದು ಹೇಳಿದ ಗೌಡರು ಉಕ್ರೇನ್ ಸರ್ಕಾರ (Ukrainian government) ಪರಿಸ್ಥಿತಿ ಬಹಳ ವಿಷಮವಾಗಿದೆ ಅಂತ ಒಪ್ಪಿಕೊಳ್ಳುತ್ತಿದೆ ಮತ್ತು ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಭಾರತ ಸರ್ಕಾರೊಂದಿಗೆ ಸಹಕರಿಸುತ್ತಿದೆ. ನಮ್ಮ ಹುಡುಗ ನವೀನ್ ಸತ್ತಿದ್ದು ರಷ್ಯನ್ ಬಾಂಬ್​ನಿಂದ. ಅಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಯತ್ನಿಸುತ್ತಿದ್ದಾರೆ. ಉಕ್ರೇನಲ್ಲಿ ಕೇವಲ ಭಾರತೀಯರು ಮಾತ್ರವಲ್ಲ, ಬೇರೆ ರಾಷ್ಟ್ರಗಳ ನಾಗರಿಕರು ಸಿಲುಕಿದ್ದಾರೆ, ಅವರು ಸಹ ನಮ್ಮಷ್ಟೇ ಚಿಂತಾಕ್ರಾಂತರಾಗಿದ್ದಾರೆ ಎಂದು ಹೆಚ್ ಡಿ ಡಿ ಹೇಳಿದರು.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪ್ರಧಾನಿ ಮೋದಿ ನಡುವೆ ಉತ್ತಮ ಸ್ನೇಹವಿದೆ. ಮೋದಿ ಪುಟಿನ್ ರೊಂದಿಗೆ ಮಾತಾಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದಷ್ಟು ಬೇಗ ಯುದ್ಧ ಕೊನೆಗೊಳ್ಳಲಿ ಅಂತ ನಾವು ಪ್ರಾರ್ಥಿಸಬೇಕಿದೆ ಎಂದು ಮಾಜಿ ಪ್ರಧಾನಿ ಹೇಳಿದರು.

ಮಾತುಕತೆಗೆ ಎದುರಾಗಿರುವ ಅತಿದೊಡ್ಡ ಸಮಸ್ಯೆಯೆಂದರೆ, ಪುಟಿನ್ ಭಯಂಕರ ಹಟಮಾರಿ ಎಂದು ದೇವೇಗೌಡರು ಹೇಳಿದರು. ಹಟಮಾರಿಗಳೊಂದಿಗೆ ಮಾತುಕತೆ ನಡೆಸಿ ಅವರನ್ನು ಒಪ್ಪಿಸುವುದು ಕಷ್ಟದ ಕೆಲಸ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  Russia-Ukraine War: ಕೀವ್​​ನಲ್ಲಿರುವ ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ; 5 ಮಂದಿ ಸಾವು, ಚಾನಲ್​​ಗಳೆಲ್ಲ ಸ್ಥಗಿತ

Published on: Mar 02, 2022 10:22 PM