ಯುವ ನಾಯಕರಾಗಿರುವ ನಿಖಿಲ್ ಮತ್ತು ವಿಜಯೇಂದ್ರ ರಾಜ್ಯದಲ್ಲಿ ತಮ್ಮ ಪಕ್ಷಗಳನ್ನು ಮುನ್ನಡೆಸಲಾರರೇ?

Updated on: Jun 26, 2025 | 7:35 PM

ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷನನ್ನಾಗಿ ಮಾಡುವ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲಾಗುತ್ತಿದೆ, ನಿಖಿಲ್ ರಾಜ್ಯದಲ್ಲಿ ಸುತ್ತಾಡುವುದನ್ನು ಮುಂದುವರಿಸಿದ್ದಾರೆ, ಜನ ನಿರೀಕ್ಷಿಸಿದಷ್ಟು ಸೇರುತ್ತಿಲ್ಲ. ಮತ್ತೊಂದೆಡೆ ವಿಜಯೇಂದ್ರ ಅವರನ್ನು ಬದಲಾಯಿಸುವ ಸೂಚನೆಗಳು ದಿನ ಕಳೆದಂತೆ ನಿಚ್ಚಳವಾಗುತ್ತಿವೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿರುವದರಿಂದ ಪಕ್ಷದ ಜನಪ್ರಿಯತೆ ಕಡಿಮೆಯಾಗುವುದನ್ನು ಸಹಿಸಲಾರದು.

ರಾಯಚೂರು, ಜೂನ್ 26: ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆಯ ಕೆಲಸ ಶುರುಮಾಡಿದ್ದಾರೆ . ರಾಜ್ಯದೆಲ್ಲೆಡೆ ಸುತ್ತುತ್ತಿರುವ ಅವರು ಇಂದು ಜಿಲ್ಲೆಯ ಸಿಂಧನೂರಲ್ಲಿ (Sindhanur) ಒಂದು ಸಮಾವೇಶ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಅವರಿಗೆ ಪತ್ರಕರ್ತರು, ಬಿಜೆಪಿ ರಾಜ್ಯಾಧ್ಯಕ್ಷರಾಗಿರವ ವಿಜಯೇಂದ್ರ ತಮ್ಮ ತಂದೆಯ ಸಾಧನೆ ಮತ್ತು ಜೆಡಿಎಸ್ ನಾಯಕರಾಗಿರವ ನೀವು, ನಿಮ್ಮ ತಾತ ಹಾಗೂ ತಂದೆಯ ಸಾಧನೆಗಳನ್ನು ಹೇಳಿಕೊಳ್ಳುತ್ತಿರುವಿರಿ, ಜನ ಯಾರನ್ನು ನಂಬಬೇಕು ಅಂತ ಕೇಳಿದಾಗ; ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳು, ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದೇವೆ ಮತ್ತು ಒಳ್ಳೆಯ ಉದ್ದೇಶಕ್ಕಾಗಿ ಕೈ ಜೋಡಿಸಿದ್ದೇವೆ, ಅವರ ಸಂಘಟನೆ ಅವರು ಮಾಡುತ್ತಾರೆ ನಮ್ಮ ಸಂಘಟನೆ ನಾವು ಮಾಡುತ್ತೇವೆ ಎಂದು ನಿಖಿಲ್ ಹೇಳಿದರು.

ಇದನ್ನೂ ಓದಿ: ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್ ಕುಮಾರಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ