ಕೆ ಸುಧಾಕರ್ ವಾಪಸ್ಸು ಬಂದರೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಸಿಗುವುದೇ ಅಂದಾಗ ಪರಮೇಶ್ವರ್ ಸಿಡುಕಿದರು!
ಕೆಲದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಸುಧಾಕರ್ ಬಿಜೆಪಿ ಸೇರಿದ್ದಕ್ಕೆ ಒಂದು ಬಗೆಯ ಹತಾಶೆ ಮತ್ತು ವಿಷಾದದ ಭಾವದಲ್ಲಿ ಮಾತಾಡಿದ್ದರು. ಕಾಂಗ್ರೆಸ್ ನಲ್ಲೇ ಉಳಿದಿದ್ದರೆ ಶಾಸಕರಂತೂ ಆಗೇ ಆಗುತ್ತಿದ್ದಿರಿ ಅಂತ ಬೆಂಬಲಿಗರು ಹೇಳುತ್ತಿದ್ದಾರೆ ಎಂದಿದ್ದರು. ಅವರು ತಮ್ಮ ಮನದಾಳದ ಮಾತನ್ನು ಬೆಂಬಲಿಗರ ಮೇಲೆ ಹಾಕಿ ಹಾಗೆ ಹೇಳಿರಬಹುದು ಎಂದು ರಾಜಕೀಯ ಪರಿಣಿತರು ಹೇಳುತ್ತಿದ್ದಾರೆ
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwara), ಮಂಡ್ಯದಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ (Mandya SP) ಅನುಮತಿ ನೀಡಿದ್ದಾರೆ, ಆದರೆ ಕಾನೂನು ಉಲ್ಲಂಘಿಸುವ ಕೃತ್ಯಗಳಲ್ಲಿ ಪ್ರತಿಭಟನೆಕಾರರು ತೊಡಗಿದರೆ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಡಾ ಕೆ ಸುಧಾಕರ್ (Dr K Sudhakar) ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಪರಮೇಶ್ವರ್ ಸಿಡುಕಿದರು. ಕೆಲದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಸುಧಾಕರ್ ಬಿಜೆಪಿ ಸೇರಿದ್ದಕ್ಕೆ ಒಂದು ಬಗೆಯ ಹತಾಶೆ ಮತ್ತು ವಿಷಾದದ ಭಾವದಲ್ಲಿ ಮಾತಾಡಿದ್ದರು. ಕಾಂಗ್ರೆಸ್ ನಲ್ಲೇ ಉಳಿದಿದ್ದರೆ ಶಾಸಕರಂತೂ ಆಗೇ ಆಗುತ್ತಿದ್ದಿರಿ ಅಂತ ಬೆಂಬಲಿಗರು ಹೇಳುತ್ತಿದ್ದಾರೆ ಎಂದಿದ್ದರು. ಅವರು ತಮ್ಮ ಮನದಾಳದ ಮಾತನ್ನು ಬೆಂಬಲಿಗರ ಮೇಲೆ ಹಾಕಿ ಹಾಗೆ ಹೇಳಿರಬಹುದು ಎಂದು ರಾಜಕೀಯ ಪರಿಣಿತರು ಹೇಳುತ್ತಿದ್ದಾರೆ. ಅವರೇನಾದರೂ ಪಕ್ಷಕ್ಕೆ ವಾಪಸ್ಸಾಗುವ ಬಗ್ಗೆ ಮಾತಾಡಿದ್ದಾರೆಯೇ? ಬಂದರೆ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಚಿಕ್ಕಬಳ್ಳಾಪುರದ ಟಿಕೆಟ್ ನೀಡಬಹುದೇ ಅಂತ ಕೇಳಿದಾಗ ಅದನ್ನು ಸುಧಾಕರ್ ಅವರನ್ನೇ ಕೇಳಿ ಅಂತ ಕೋಪದಲ್ಲಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ