ಗದಗ: ದಾರಿ ಬಿಡಿ ಅಂತ ಹಾರ್ನ್ ಮಾಡಿದ್ದಕ್ಕೆ ಕೆಎಸ್ಸಾರ್ಟಿಸಿ ಬಸ್ ಚಾಲಕನ ಮೇಲೆ ಕಾರಲ್ಲಿದ್ದ ಯುವಕರಿಂದ ಹಲ್ಲೆ
ಕಾರಿನಲ್ಲಿದ್ದರವರು ಸೈಡ್ ವ್ಯೂ ಮಿರರ್ ಗಳನ್ನು ಒಳಭಾಗಕ್ಕೆ ಎಳೆದುಕೊಂಡು ಮುಚ್ಚಿದ್ದರಿಂದ ಹಿಂದೆ ಬರುತ್ತಿದ್ದ ವಾಹನ ಅವರಿಗೆ ಕಾಣುವುದು ಸಾಧ್ಯವಿರಲಿಲ್ಲ. ಹಾಗಾಗೇ ಬಸ್ ಚಾಲಕ ಹಾರ್ನ್ ಮಾಡಿದ್ದಾರೆ. ಹಾರ್ನ್ ಶಬ್ದದಿಂದ ಕುಪಿತಗೊಂಡ ಕಾರಲ್ಲಿದ್ದವರು ಕೆಳಗಿಳಿದು ಬಸ್ ಡ್ರೈವರ್ ಬಳಿ ಹಲ್ಲೆ ನಡೆಸಿದ್ದಾರೆ ಮತ್ತು ಮನಸ್ಸಿಗೆ ಬಂದಂತೆ ಬೈದಾಡಿದ್ದಾರೆ.
ಗದಗ: ಇದು ದುರಹಂಕಾರಲ್ಲದೆ (arrogance) ಮತ್ತೇನೂ ಆಗಲಾರದು. ವಿಷಯ ಬಹಳ ಸಿಂಪಲ್ ಆಗಿದೆ, ಆದರೆ ಕಾರಲ್ಲಿದ್ದ ದುರುಳರು ಅದನ್ನು ದೊಡ್ಡದು ಮಾಡಿದ್ದಾರೆ. ಮೊಬೈಲ್ ವಿಡಿಯೋನಲ್ಲಿ ಸೆರೆಹಿಡಿದಿರುವ ದೃಶ್ಯಗಳ ಘಟನೆ, ಗದಗ ನಗರದ (Gadag city outskirts) ಹೊರವಲಯ ಅಸುಂಡಿಯಲ್ಲಿ ನಡೆದಿದೆ. ಗದಗನಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರಿದ ಬಸ್ಸು ಅಸುಂಡಿ ಬಳಿ ಬಂದಾಗ ತನ್ನ ಮುಂದೆ ಹೋಗುತ್ತಿದ್ದ ಕಾರಿಗೆ ಸೈಡ್ ಬಿಡುವಂತೆ ಬಸ್ಸಿನ ಚಾಲಕ ಹಾರ್ನ್ ಮಾಡಿದ್ದಾರೆ. ಕಾರಿನಲ್ಲಿದ್ದರವರು ಸೈಡ್ ವ್ಯೂ ಮಿರರ್ ಗಳನ್ನು ಒಳಭಾಗಕ್ಕೆ ಎಳೆದುಕೊಂಡು ಮುಚ್ಚಿದ್ದರಿಂದ ಹಿಂದೆ ಬರುತ್ತಿದ್ದ ವಾಹನ ಅವರಿಗೆ ಕಾಣುವುದು ಸಾಧ್ಯವಿರಲಿಲ್ಲ. ಹಾಗಾಗೇ ಬಸ್ ಚಾಲಕ ಹಾರ್ನ್ ಮಾಡಿದ್ದಾರೆ. ಹಾರ್ನ್ ಶಬ್ದದಿಂದ ಕುಪಿತಗೊಂಡ ಕಾರಲ್ಲಿದ್ದವರು ಕೆಳಗಿಳಿದು ಬಸ್ ಡ್ರೈವರ್ ಬಳಿ ಹಲ್ಲೆ ನಡೆಸಿದ್ದಾರೆ ಮತ್ತು ಮನಸ್ಸಿಗೆ ಬಂದಂತೆ ಬೈದಾಡಿದ್ದಾರೆ. ಅವರ ಅವಾಚ್ಯ ಪದ ಬಳಕೆಯಿಂದ ಬಸ್ ಚಾಲಕನಿಗೂ ಸಿಟ್ಟು ಬಂದಿದೆ.
ಕ್ಯಾಬಿನ್ ನಿಂದ ಕೆಳಗಿಳಿದು ಯವಕರಿಗೆ ತಿರುಗೇಟು ನೀಡಬೇಕೆಂದಿದ್ದ ಅವರನ್ನು ಬಸ್ ನಲ್ಲಿದ್ದ ಮಹಿಳಾ ಪ್ರಯಾಣಿಕರು ತಡೆಯುತ್ತಾರೆ. ಡ್ರೈವರ್ ಹೆಸರು ಸಂತೋಷ್ ಎಂದು ಗೊತ್ತಾಗಿದ್ದು ಆವರ ಗಾಯಗಳಿಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಕರ್ತವ್ಯನಿರತ ಒಬ್ಬ ಸರ್ಕಾರೀ ನೌಕರನ ಮೇಲೆ ಹಲ್ಲೆ ನಡೆಸಿರುವ ಯುವಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಅವರ ಮುಖ ಪರಿಚಯ ವಿಡಿಯೋದಲ್ಲಿ ಸಿಗುತ್ತದೆ ಮತ್ತು ಕಾರಿನ ನಂಬರ್ ರಸ್ತೆಬದಿಯ ಯಾವುದಾದರೂ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತದೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ