ಸರ್ಕಾರಕ್ಕೆ 20 ಕೋಟಿ ತೆರಿಗೆ ಕಟ್ಟಿದ್ದೀನಿ: ಬಹಿರಂಗವಾಗಿ ಹೇಳಿದ ಆರ್ ಚಂದ್ರು
R Chandru: ನಿರ್ದೇಶಕ ಆರ್ ಚಂದ್ರು ಒಂದೇ ದಿನ ಐದು ಸಿನಿಮಾ ಘೋಷಣೆ ಮಾಡಿದ್ದಾರೆ. ಅದೇ ಸಮಯದಲ್ಲಿ ವೇದಿಕೆ ಮೇಲೆ ಮಾತನಾಡುತ್ತಾ, ಸರ್ಕಾರಕ್ಕೆ ತಾವು 20 ಕೋಟಿ ತೆರಿಗೆ ಪಾವತಿಸಿರುವುದಾಗಿ ಹೇಳಿದ್ದಾರೆ. ಏನಿದು ವಿಷಯ? ವಿಡಿಯೋ ನೋಡಿ...
ನಿರ್ದೇಶಕ ಆರ್ ಚಂದ್ರು (R Chandru), ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಇಂದು (ಜನವರಿ 23) ಒಂದೇ ದಿನ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಐದೂ ಸಿನಿಮಾಗಳ ಟೈಟಲ್ ಲಾಂಚ್ ಮಾಡಿದ್ದಾರೆ. ವೇದಿಕೆಯಲ್ಲಿ ಭಾವೋದ್ವೇಗದಿಂದ ಮಾತನಾಡಿದ ಆರ್ ಚಂದ್ರು, ಚಿತ್ರರಂಗದಲ್ಲಿ ಕೆಲವು ಋಣಾತ್ಮಕ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾ, ‘ಕಬ್ಜ’ ಸಿನಿಮಾದಿಂದಾಗಿ ಸರ್ಕಾರಕ್ಕೆ 20 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದೇನೆ. ಯಾರಾದರೂ ಹೇಳುತ್ತಾರಾ? ನಾನು ಹೇಳುತ್ತೇನೆ. ಒಂದು ಸಿನಿಮಾ ಗೆಲ್ಲುತ್ತದೆ, ಒಂದು ಸಿನಿಮಾ ಸೋಲುತ್ತದೆ ಇನ್ನೊಬ್ಬರನ್ನು ಹಿಯಾಳಿಸಲು ಹೋಗಬಾರದು ಎಂದಿದ್ದಾರೆ. ಚಂದ್ರು ಏನು ಹೇಳಿದರು ಪೂರ್ತಿ ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 24, 2024 12:08 AM
Latest Videos
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ

