ಐದು ಸಿನಿಮಾಕ್ಕೆ ಆರ್ ಚಂದ್ರು ಹಾಕಿರುವ ಬಜೆಟ್ ಎಷ್ಟು? ಉಪೇಂದ್ರ ಹೇಳಿದ್ದು ಹೀಗೆ
R Chandru-Upendra: ಆರ್ ಚಂದ್ರು ಒಂದೇ ಬಾರಿಗೆ ಐದು ಸಿನಿಮಾ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಉಪೇಂದ್ರ, ಸಿನಿಮಾಗಳ ಬಜೆಟ್ ಬಗ್ಗೆ ಊಹೆಯೊಂದನ್ನು ಮಾಡಿದ್ದಾರೆ.
ನಿರ್ದೇಶಕ ಆರ್ ಚಂದ್ರು (R Chandru) ತಮ್ಮ ನಿರ್ಮಾಣ ಸಂಸ್ಥೆಯಿಂದ ಒಂದೇ ಬಾರಿ ಐದು ಸಿನಿಮಾ ಘೋಷಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಐದು ಸಿನಿಮಾಗಳಿಗೆ ಒಟ್ಟಿಗೆ ಚಾಲನೆ ನೀಡಿದರು. ಚಂದ್ರು ಅವರ ಮೆಚ್ಚಿನ ನಟ ಉಪೇಂದ್ರ ಅವರು ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದರು. ವೇದಿಕೆ ಮೇಲೆ ಮಾತನಾಡಿದ ಉಪೇಂದ್ರ, ‘ಐದು ಸಿನಿಮಾಕ್ಕೆ ಐದು ನೂರು ಕೋಟಿ ಹಾಕಿರಬಹುದು’ ಎಂದರು. ಚಂದ್ರು, ಬಹಳ ಧನಾತ್ಮಕ ವ್ಯಕ್ತಿ. ಏನು ಓದಿದ್ದಾರೋ ಇಲ್ಲವೋ ಆದರೆ ಜನರನ್ನು ಬಹಳ ಬೇಗನೆ ಓದುತ್ತಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 23, 2024 10:51 PM
Latest Videos