‘ಆಚಾರ್ ಆಂಡ್ ಕೋ’ ಸಿನಿಮಾ ನೋಡಿ ಪುನೀತ್ರ ಸಿನಿಮಾದ ಹಾಡು ಹಾಡಿದ ರಾಘಣ್ಣ
Aachar and co: ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಿಸಿರುವ 'ಆಚಾರ್ ಆಂಡ್ ಕೋ' ಸಿನಿಮಾ ವೀಕ್ಷಿಸಿದ ರಾಘಣ್ಣ, ಪುನೀತ್ ಅವರ ಸಿನಿಮಾದ ಹಾಡು ಹಾಡಿ ಸಿನಿಮಾಕ್ಕೆ ಕೆಲಸ ಮಾಡಿರುವ ಮಹಿಳೆಯರನ್ನು ಹೊಗಳಿದರು.
ಪಿಆರ್ಕೆ ಪ್ರೊಡಕ್ಷನ್ (PRK Productions) ನಿರ್ಮಾಣ ಮಾಡಿರುವ ‘ಆಚಾರ್ ಆಂಡ್ ಕೋ’ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದ್ದು, ನಿನ್ನೆ (ಜುಲೈ 26) ಸಿನಿಮಾದ ಸೆಲೆಬ್ರಿಟಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದರು. ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಸಹ ಸಿನಿಮಾದ ಪ್ರೀಮಿಯರ್ ಶೋ ನೋಡಿ, ಸಿನಿಮಾದ ಬಗ್ಗೆ ಬಹಳ ಖುಷಿಯಿಂದ ಮಾತನಾಡಿದರು. ಅದರಲ್ಲಿಯೂ ಯುವತಿ ಸಿಂಧೂ ಈ ಸಿನಿಮಾವನ್ನು ನಿರ್ದೇಶಿಸಿರುವ ಬಗ್ಗೆ ಹೊಗಳಿದ ರಾಘಣ್ಣ, ಪುನೀತ್ ನಟಿಸಿದ್ದ ಸಿನಿಮಾ ಒಂದರ ಹಾಡನ್ನು ಹಾಡಿದರು.
Published on: Jul 26, 2023 11:18 PM
Latest Videos