‘ಕಾವೇರಿಗೆ ನಾನು ಜೀವ ಕೊಡ್ತೀನಿ’: ವಾಣಿಜ್ಯ ಮಂಡಳಿ ಚುನಾವಣೆ ವೇಳೆ ರಾಘವೇಂದ್ರ ರಾಜ್ಕುಮಾರ್ ಹೇಳಿಕೆ
‘ವಾಣಿಜ್ಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿ ಇರುತ್ತೇವೆ. ನನ್ನ ಈ ಜೀವ 10 ವರ್ಷದಿಂದ ಕಷ್ಟಪಟ್ಟುಕೊಂಡು ಬದುಕುತ್ತಿದೆ. ಜೀವ ಕೊಡುವುದರಿಂದ ಕಾವೇರಿಗೆ ಒಳ್ಳೆಯದು ಆಗುತ್ತೆ ಎಂದರೆ ನನ್ನ ಜೀವ ಕೊಡಲು ನಾನು ಮತ್ತು ನಮ್ಮ ಕುಟುಂಬ ಸಿದ್ಧ’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
ಕಾವೇರಿ ನೀರು (Cauvery Water) ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಬಿಕ್ಕಟ್ಟು ಉಂಟಾಗಿದೆ. ಕರುನಾಡಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ವೇಳೆ ಚಿತ್ರೋದ್ಯಮದಿಂದಲೂ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿದೆ. ನೀರಿಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಭಾಗಿಯಾಗಲು ತಾವು ಸಿದ್ದ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ. ಇಂದು (ಸೆಪ್ಟೆಂಬರ್ 23) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ನಮ್ಮ ಜನರಿಗೆ ತೊಂದರೆ ಆದಾಗ ನಮ್ಮ ಚಿತ್ರರಂಗ ಮತ್ತು ಕುಟುಂಬ ಯಾವಾಗಲೂ ಮುಂದೆ ಬರುತ್ತದೆ. ಎಲೆಕ್ಷನ್ ಬಳಿಕ ವಾಣಿಜ್ಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿ ಇರುತ್ತೇವೆ. ನನ್ನ ಈ ಜೀವ 10 ವರ್ಷದಿಂದ ಕಷ್ಟಪಟ್ಟುಕೊಂಡು ಬದುಕುತ್ತಿದೆ. ಜೀವ ಕೊಡುವುದರಿಂದ ಕಾವೇರಿಗೆ ಒಳ್ಳೆಯದು ಆಗುತ್ತೆ ಎಂದರೆ ನನ್ನ ಜೀವ ಕೊಡಲು ನಾನು ಮತ್ತು ನಮ್ಮ ಕುಟುಂಬ ಸಿದ್ಧ’ ಎಂದು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
