ರಾಜ್ಕುಮಾರ್ ಹುಟ್ಟೂರು ಗಾಜನೂರಿನಲ್ಲಿ ರಾಘಣ್ಣ ಸಂಚಾರ
‘ಕನ್ನಡಕ್ಕೆ ಮೊದಲ ಗೌರವ..’ ಎಂಬ ಹಾಡಿನ ಚಿತ್ರೀಕರಣ ಕೂಡ ಇದೇ ಊರಿನಲ್ಲಿ ನಡೆಯಲಿದೆ. ರಾಘವೇಂದ್ರ ರಾಜ್ಕುಮಾರ್ ಅವರು ಗಾಜನೂರಿನಲ್ಲಿ ಸುತ್ತಾಟ ನಡೆಸಿದ್ದಾರೆ.
ರಾಘವೇಂದ್ರ ರಾಜ್ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘ಖಡಕ್ ಹಳ್ಳಿ ಹುಡುಗರು’ ಚಿತ್ರದ (Khadak Halli Hudugaru) ಮುಹೂರ್ತ ಇಂದು (ಮಾರ್ಚ್ 10) ನೆರೆವೇರಿದೆ. ಡಾ. ರಾಜ್ಕುಮಾರ್ ಅವರ (Dr Rajkumar) ಹುಟ್ಟೂರಾದ ಚಾಮರಾಜನಗರದ ಗಾಜನೂರಿನಲ್ಲಿ ಇದರ ಮುಹೂರ್ತ ನೆರವೇರಿರುವುದು ವಿಶೇಷ. ರಾಘವೇಂದ್ರ ರಾಜ್ಕುಮಾರ್ ಅವರ ಸೋದರತ್ತೆ ನಾಗಮ್ಮ ಪೂಜೆ ಮಾಡಿ, ಸಿನಿಮಾಗೆ ಚಾಲನೆ ನೀಡಿದರು. ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಹೀರೋ ಅಲ್ಲ. ಆದರೆ, ಅವರ ಪಾತ್ರ ತುಂಬಾನೇ ಪ್ರಾಮುಖ್ಯತೆ ವಹಿಸಲಿದೆ. ರಾಜ್ಕುಮಾರ್ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದೆ. ‘ಕನ್ನಡಕ್ಕೆ ಮೊದಲ ಗೌರವ..’ ಎಂಬ ಹಾಡಿನ ಚಿತ್ರೀಕರಣ ಕೂಡ ಇದೇ ಊರಿನಲ್ಲಿ ನಡೆಯಲಿದೆ. ರಾಘವೇಂದ್ರ ರಾಜ್ಕುಮಾರ್ ಅವರು ಗಾಜನೂರಿನಲ್ಲಿ ಸುತ್ತಾಟ ನಡೆಸಿದ್ದಾರೆ.
ಇದನ್ನೂ ಓದಿ: James: ‘ಜೇಮ್ಸ್ನಲ್ಲಿ ಅಪ್ಪುನ ಕಣ್ತುಂಬ ನೋಡಬೇಕು’; ಮನದಿಂಗಿತ ಹೇಳಿಕೊಂಡ ವಿಜಯ್ ರಾಘವೇಂದ್ರ
ನಾಗತ್ತೆ ಮನೆಯಲ್ಲಿ ಭಾವುಕರಾದ ರಾಘವೇಂದ್ರ ರಾಜ್ಕುಮಾರ್-ಮಂಗಳಾ ದಂಪತಿ; ಇಲ್ಲಿದೆ ವಿಡಿಯೋ