ಮೈಸೂರು: ಸೋನಿಯಾರನ್ನು ಸ್ವಾಗತಿಸಲು ರಾಹುಲ್ ಗಾಂಧಿ ಬೆಂಗಾವಲು ಪಡೆಗಳೊಂದಿಗೆ ತೆರಳಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 03, 2022 | 1:31 PM

ಸೋನಿಯಾ ಅವರನ್ನು ಸ್ವಾಗತಿಸಿ ತಮ್ಮೊಂದಿಗೆ ಕರೆದೊಯ್ಯಲು ರಾಹುಲ್ ಗಾಂಧಿ ತಮ್ಮ ಕಾನ್ವಾಯ್ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದರು.

ಮೈಸೂರು: ಇದು ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಅಭಿಯಾನದ ಭಾಗವಲ್ಲ. ವಿಷಯ ಏನೆಂದರೆ ಸೋನಿಯಾ ಗಾಂಧಿಯವರು ಅಭಿಯಾನದಲ್ಲಿ ಭಾಗವಹಿಸುವ ಉದ್ದೇಶದೊಂದಿಗೆ ಮೈಸೂರಿಗೆ ಆಗಮಿಸಿದ್ದಾರೆ. ಅವರನ್ನು ಸ್ವಾಗತಿಸಿ ತಮ್ಮೊಂದಿಗೆ ಕರೆದೊಯ್ಯಲು ರಾಹುಲ್ ಗಾಂಧಿಯವರು ತಮ್ಮ ಕಾನ್ವಾಯ್ ಜೊತೆ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾರೆ. ರಾಹುಲ್ ಗೆ ಯಾವ ಸ್ವರೂಪದ ಭದ್ರತೆ ಕಲ್ಪಿಸಲಾಗಿದೆ ಅಂತ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಅವರ ಹಿಂದೆ ಮುಂದೆ ಭದ್ರತೆ ಮತ್ತು ಬೆಂಗಾವಲು ಪಡೆಯ ವಾಹನಗಳನ್ನು ವಿಡಿಯೋದಲ್ಲಿ ನೋಡಬಹುದು.