ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅರೋಪ ಮಾಡುತ್ತಿರುವ ರಾಹುಲ್ ಗಾಂಧಿಗೆ ಚಿಕಿತ್ಸೆಯ ಅಗತ್ಯವಿದೆ: ಸಿಟಿ ರವಿ

Updated on: Aug 02, 2025 | 5:14 PM

ದೇಶದ ಭವಿಷ್ಯ ರಾಹುಲ್ ಗಾಂಧಿ ಮೇಲೆ ಆಧಾರಗೊಂಡಿಲ್ಲ, ಅದರೆ ಕೆಲ ಕಾಂಗ್ರೆಸ್ ನಾಯಕರ ಭವಿಷ್ಯ ನಿಸ್ಸಂದೇಹವಾಗಿ ಅವರ ಮೇಲೆ ಆತುಕೊಂಡಿದೆ, ಹಾಗಾಗಿ ಅವರ ಅರೋಗ್ಯದ ಬಗ್ಗೆ ಕಾಳಜಿ, ಕಳಕಳಿ ಇರುವ ಕಾಂಗ್ರೆಸ್ ನಾಯಕರು ರಾಹುಲ್​ರನ್ನು ಯಾವುದಾದರೂ ಅಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ಕೊಡಬಯಸುತ್ತೇನೆ ಎಂದು ರವಿ ಹೇಳಿದರು.

ಬೆಂಗಳೂರು, ಆಗಸ್ಟ್ 2: ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಾಗಲೆಲ್ಲ ಹುಚ್ಚುಚ್ಚಾಗಿ ಅಡುತ್ತದೆ, ಅದರ ಡಿಎನ್​ಎನಲ್ಲೇ ಆ ಗುಣ ಸೇರಿರುವುದರಿಂದ ಅಗೊಮ್ಮೆ ಈಗೊಮ್ಮೆ ಬುದ್ಧಿ ಭ್ರಮಣೆ ಆಗುತ್ತದೆ ಮತ್ತು ಮಾನಸಿಕ ಸಮತೋಲನ (mental balance) ತಪ್ಪಿ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಅರೋಪಗಳನ್ನು ಮಾಡಲಾರಂಭಿಸುತ್ತದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಅರೋಪ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದರು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ವೋಟರ್ ಲಿಸ್ಟ್ ನಲ್ಲಿ ಹೆಸರುಗಳ ಸೇರ್ಪಡೆಗಿಂತ ಡಿಲೀಷನ್ ಜಾಸ್ತಿಯಾಗಿದೆ. ಪ್ರತಿ ಮತಗಟ್ಟೆಯಲ್ಲಿ 5 ಹೊಸ ಹೆಸರುಗಳ ಸೇರ್ಪಡೆಯಾಗಿದ್ದರೆ, ಒಂದು ಹೆಸರು ಮಾತ್ರ ಡಿಲೀಟ್ ಆಗಿದೆ, ತಾವು ಮಾಡುತ್ತಿರುವ ಅರೋಪಗಳನ್ನು ನ್ಯಾಯಾಲಯದಲ್ಲಿ ಪ್ರೂವ್ ಮಾಡಲಿ ಎಂದು ರಾಹುಲ್ ಗಾಂಧಿಗೆ ಸವಾಲೆಸೆಯುತ್ತೇನೆ ಎಂದು ರವಿ ಹೇಳಿದರು.

ಇದನ್ನೂ ಓದಿ:  ಕೆಲ ಬಿಜೆಪಿ ನಾಯಕರು ಯಾಕೆ ಅತೃಪ್ತರೋ ಗೊತ್ತಿಲ್ಲ, ಸೈದ್ಧಾಂತಿಕವಾಗಿ ನಾವೆಲ್ಲ ತೃಪ್ತರು: ಸಿಟಿ ರವಿ, ಎಮ್ಮೆಲ್ಸಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ