ಚಾಕೊಲೇಟ್ಗಳಂತೆ ಕಾಣುವ ರ್ಯಾಪರ್ಗಳಲ್ಲಿ ಗಾಂಜಾ ಮಿಶ್ರಣ ಮಾರುತ್ತಿದ್ದ ಜಾಲ ಬಯಲಿಗೆಳೆದ ರಾಯಚೂರು ಅಬ್ಕಾರಿ ಇಲಾಖೆ
ಮಕ್ಕಳು ಇವುಗಳನ್ನು ಚಾಕೊಲೆಟ್ ಗಳೆಂದು ಭಾವಿಸಿ ತಿನ್ನುವ ಸಾಧ್ಯತೆ ಇರೋದ್ರಿಂದ ಪೋಷಕರ ಎಚ್ಚರದಿಂದ ಇರಬೇಕು ಎಂದು ಜಾಲವನ್ನು ಭೇದಿಸಿರುವ ಹನುಮಂತ ಗುತ್ತೇದಾರ ಹೇಳುತ್ತಾರೆ
ರಾಯಚೂರು: ಒಂದು ಅಪಾಯಕಾರಿ ಮತ್ತು ಸಮಾಜಘಾತುಕ ನೆಟ್ವರ್ಕ್ ಅನ್ನು ನಗರದ ಅಬ್ಕಾರಿ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡುವವರು ಚಾಕೊಲೇಟ್ ಗಳಂತೆ ಕಾಣುವ ಱಪರ್ ಗಳಲ್ಲಿ ಸುತ್ತಿ ನಗರದ ಕೆಲ ಭಾಗಗಳಲ್ಲಿ ಮಾರುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಅಸಲಿಗೆ ಈ ಮಾಲು ಉತ್ತರ ಪ್ರದೇಶದಿಂದ (Uttar Pradesh) ಅಕ್ರಮವಾಗಿ ಉತ್ತರ ಕರ್ನಾಟಕದ ಯಾದಗಿರಿ ಮತ್ತು ಕಲಬುರಗಿ ನಗರಗಳಿಗೆ ಬರುತ್ತಿತ್ತು ಮತ್ತು ಅಲ್ಲಿನ ಪೊಲೀಸ್ ಮತ್ತು ಅಬ್ಕಾರಿ ಅಧಿಕಾರಿಗಳು ರಾಯಚೂರಿನ ಅಧಿಕಾರಿಗಳಿಗೆ ಅದರ ಬಗ್ಗೆ ಮಾಹಿತಿ ರವಾನಿಸಿದಾಗಲೇ ಎಚ್ಚೆತ್ತುಕೊಂಡಿದ್ದ ಅವರು ಇಂದು ಲಭ್ಯವಾದ ಖಚಿತ ಮಾಹಿತಿಯೊಂದನ್ನು ಆಧರಿಸಿ ನಗರದ ಎಲ್ ಬಿಎಸ್ ಕಾಲೊನಿ ನಿವಾಸಿಗಳಾದ ರಾಚಯ್ಯ ಸ್ವಾಮಿ (Rachaiah Swamy) ಮತ್ತು ಅಂಬ್ರಯ್ಯ ಸ್ವಾಮಿ (Ambraiah Swamy) ಎನ್ನುವವರ ಮನೆಗಳ ಮೇಲೆ ದಾಳಿ ನಡೆಸಿ 2.668 ತೂಕದಷ್ಟು ಗಾಂಜಾ ಮಿಶ್ರಿತ ಚಾಕೊಲೆಟ್ ನಂತೆ ಕಾಣುವ ವಸ್ತುಗಳನ್ನು ಬರಾಮತ್ತು ಮಾಡಿಕೊಂಡಿದ್ದಾರೆ. ಮಕ್ಕಳು ಇವುಗಳನ್ನು ಚಾಕೊಲೆಟ್ ಗಳೆಂದು ಭಾವಿಸಿ ತಿನ್ನುವ ಸಾಧ್ಯತೆ ಇರೋದ್ರಿಂದ ಪೋಷಕರ ಎಚ್ಚರದಿಂದ ಇರಬೇಕು ಎಂದು ರಾಯಚೂರಲ್ಲಿ ಅಬ್ಕಾರಿ ನಿರೀಕ್ಷಕರಾಗಿ ಕೆಲಸ ಮಾಡುವ ಮತ್ತು ಈ ಜಾಲವನ್ನು ಭೇದಿಸಿರುವ ಹನುಮಂತ ಗುತ್ತೇದಾರ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ