ಕಂಠ ಪೂರ್ತಿ ಕುಡಿದು ಬಂದು ಶಾಲೆಯಲ್ಲಿ ಮಲಗಿದ ಮುಖ್ಯ ಶಿಕ್ಷಕ: ವಿಡಿಯೋ ನೋಡಿ
ಮುಖ್ಯ ಶಿಕ್ಷಕನೊಬ್ಬ ಕಂಠಪೂರ್ತಿ ಕುಡಿದುಬಂದು ಶಾಲೆ ಮುಂಭಾಗದಲ್ಲಿ ಮಲಗಿದ ವಿಚಿತ್ರ ವಿದ್ಯಮಾನಕ್ಕೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಅಂಬಾದೇವಿ ಸರ್ಕಾರಿ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ. ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮದ್ಯಪಾನ ಮಾಡಿ ಬಂದು ಮಲಗಿದ ಶಿಕ್ಷಕನ ವಿಡಿಯೋ ಇಲ್ಲಿದೆ.
ರಾಯಚೂರು, ಜುಲೈ 25: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಅಂಬಾದೇವಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ನಿಂಗಪ್ಪ ಕಂಠ ಪೂರ್ತಿ ಮದ್ಯಪಾನ ಮಾಡಿ ಬಂದು ಶಾಲೆಯಲ್ಲಿ ಮಲಗಿದ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ಶಾಲೆ ಮುಂಭಾಗದಲ್ಲಿಯೇ ಮಲಗಿದ ನಿಂಗಪ್ಪ ವಿರುದ್ಧ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಪಾಠ ಮಾಡದೆ, ಕಂಠ ಪೂರ್ತಿ ಕುಡಿದು ಮಲಗುತ್ತಾರೆಂದು ಗ್ರಾಮಸ್ಥರು ಆರೋಪಿಸಿದ್ದು, ನಿಂಗಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮುಖ್ಯ ಶಿಕ್ಷಕನ ವಿಡಿಯೋ ಗ್ರಾಮಸ್ಥರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.