ರಾಯಚೂರು ಜಿಲ್ಲೆಯಲ್ಲೂ ಕರ್ಕಶವಾಗಿ ಸದ್ದು ಮಾಡುತ್ತಿದ್ದ ವಾಹನಗಳ ಸೈಲೆನ್ಸರ್​ ವಿರುದ್ಧ ಪೊಲೀಸರ ಕಾರ್ಯಾಚರಣೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 28, 2022 | 12:40 PM

ಕರ್ಕಶವಾಗಿ ಸದ್ದು ಮಾಡುತ್ತಿದ್ದ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡು, ಅವುಗಳನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಂಡಿದ್ದ ವಾಹನ ಮಾಲೀಕರ ಮೇಲೆ ಭಾರಿ ಪ್ರಮಾಣದ ಜುಲ್ಮಾನೆ ವಿಧಿಸಿದ್ದೂ ಅಲ್ಲದೆ ಆ ಸೈಲೆನ್ಸರ್​ಗಳನ್ನು ರೋಡ್ ರೋಲರ್ ಬಳಸಿ ಹಾಳು ಮಾಡಿದ್ದಾರೆ.

Raichur: ಸಂತೋಷದ ಸಂಗತಿಯೆಂದರೆ ಕರ್ಕಶವಾಗಿ ಸದ್ದು ಮಾಡುತ್ತಾ ದಾರಿಹೋಕರಿಗೆ ಭಯಂಕರ ಕಿರಿಕಿರಿ ಉಂಟು ಮಾಡುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸೈಲೆನ್ಸರ್ ಗಳನ್ನು ಕಿತ್ತು ನಾಶಪಡಿಸುವ ಕೆಲಸ ಬೇರೆ ಬೇರೆ ಜಿಲ್ಲೆಗಳ ಪೊಲೀಸರಿಂದ ಆಗುತ್ತಿದೆ. ಹಿಂದೆ ಚಿಕ್ಕಮಗಳೂರು ಜಿಲ್ಲ್ಲೆಯ ಒಂದು ದೃಶ್ಯವನ್ನು ನಾವು ನಿಮಗೆ ತೋರಿಸಿದ್ದೆವು. ಇದು ರಾಯಚೂರಿನಿಂದ ಲಭ್ಯವಾಗಿರುವ ದೃಶ್ಯ. ಜಿಲ್ಲೆ ಯಾದ್ಯಂತ ಪೊಲೀಸರು ಕರ್ಕಶವಾಗಿ ಸದ್ದು ಮಾಡುತ್ತಿದ್ದ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡು, ಅವುಗಳನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಂಡಿದ್ದ ವಾಹನ ಮಾಲೀಕರ ಮೇಲೆ ಭಾರಿ ಪ್ರಮಾಣದ ಜುಲ್ಮಾನೆ ವಿಧಿಸಿದ್ದೂ ಅಲ್ಲದೆ ಆ ಸೈಲೆನ್ಸರ್ಗಳನ್ನು ರೋಡ್ ರೋಲರ್ ಬಳಸಿ ಹಾಳು ಮಾಡಿದ್ದಾರೆ.

ಇದನ್ನೂ ಓದಿ:  ಪ್ರೀತಿಸಿದ ಹುಡುಗಿ ಮೋಸ ಮಾಡಿದ್ದಕ್ಕೆ ಮನನೊಂದ ಯುವಕ; ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು