ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯನ್ನು ಭೇಟಿಯಾಗಲು ದಾಖಲೆಗಳೊಂದಿಗೆ ಆಗಮಿಸಿದರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
ಕೆಂಪಣ್ಣನವರು ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಲಿಲ್ಲವಾದರೂ ಅಧಿಕಾರಿ ಹೇಳಿರುವ ಎಲ್ಲ ದಾಖಲಾತಿಗಳು ತಮ್ಮಲ್ಲಿವೆ ಎಂದು ಹೇಳಿದರು ಮತ್ತು ಅವರನ್ನು ಭೇಟಿಯಾದ ಬಳಿಕ ಎಲ್ಲ ವಿವರ ನೀಡುವುದಾಗಿ ತಿಳಿಸಿದರು.
Bengaluru: ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಶನ್ (commission) ಆರೋಪ ಹೊರಿಸಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು (Kempanna) ಗೃಹ ಸಚಿವಾಲಯಕ್ಕೆ (home ministry) ಪತ್ರವೊಂದನ್ನು ಬರೆದಿದ್ದರು. ಕೆಂಪಣ್ಣನವರ ಪತ್ರಕ್ಕೆ ಕಾರ್ಯಾಲಯ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಅವರೊಂದಿಗೆ ಚರ್ಚೆ ನಡೆಸಲು ದೆಹಲಿಯಿಂದ ಒಬ್ಬ ಅಧಿಕಾರಿಯನ್ನು ಕಳಿಸಿದೆ. ಅವರನ್ನು ದಾಖಲಾತಿಗಳೊಂದಿಗೆ ಬರಲು ಅಧಿಕಾರಿ ತಿಳಿಸಿದ್ದರಿಂದ ಕೆಂಪಣ್ಣ ನಿಗದಿತ ಸ್ಥಳಕ್ಕೆ ಆಗಮಿಸಿದಾಗ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಮಾತಾಡಿಸಿದರು. ಕೆಂಪಣ್ಣನವರು ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಲಿಲ್ಲವಾದರೂ ಅಧಿಕಾರಿ ಹೇಳಿರುವ ಎಲ್ಲ ದಾಖಲಾತಿಗಳು ತಮ್ಮಲ್ಲಿವೆ ಎಂದು ಹೇಳಿದರು ಮತ್ತು ಅವರನ್ನು ಭೇಟಿಯಾದ ಬಳಿಕ ಎಲ್ಲ ವಿವರ ನೀಡುವುದಾಗಿ ತಿಳಿಸಿದರು.
ಇದನ್ನೂ ಓದಿ: ಅಪ್ಪು.. ಅಪ್ಪು.. ಎಂದು ಕೂಗಿದ ಅಭಿಮಾನಿಗಳಿಗೆ ಶಿವಣ್ಣ ವಾರ್ನಿಂಗ್; ಇಲ್ಲಿದೆ ವಿಡಿಯೋ
Latest Videos