ಕೋಲಾರದ ಕೆಜಿಎಫ್ ತಾಲ್ಲೂಕಿನಲ್ಲೂ ಮಳೆ-ಗಾಳಿಯಿಂದ ಮಾವು ಬೆಳೆಗಾರರು ಕಂಗಾಲು, ಉದುರಿಬಿದ್ದಿವೆ ಅಸಂಖ್ಯಾತ ಕಾಯಿಗಳು

ಕೋಲಾರದ ಕೆಜಿಎಫ್ ತಾಲ್ಲೂಕಿನಲ್ಲೂ ಮಳೆ-ಗಾಳಿಯಿಂದ ಮಾವು ಬೆಳೆಗಾರರು ಕಂಗಾಲು, ಉದುರಿಬಿದ್ದಿವೆ ಅಸಂಖ್ಯಾತ ಕಾಯಿಗಳು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 12, 2022 | 1:08 AM

ನೆಲಕ್ಕೆ ಬಿದ್ದ ಕಾಯಿಗಳು ಹಾಳಾದಂತೆಯೇ. ಕೆಳಗೆ ಬಿದ್ದಾಗ ಆಗುವ ಪೆಟ್ಟು ಕಾಯಿ ಮಾಗಿದರೂ ಅದನ್ನು ಕೊಳೆಸಿಬಿಡುತ್ತದೆ. ಕೊಳೆತ ಹಣ್ಣಿಗೆ ಹುಳ ಹಿಡಿಯುತ್ತದೆ. ಹಾಗಾಗೇ ಪಾಟಿಗೆ ಹಾಕಲು ಕಾಯಿಗಳನ್ನು ಇಳಿಸುವಾಗ ರೈತರು ಅವು ನೆಲಕ್ಕೆ ಬೀಳದಂತೆ ಬಹಳ ಜಾಗರೂಕತೆ ವಹಿಸುತ್ತಾರೆ.

Kolar: ಈ ವರ್ಷದ ಅಕಾಲಿಕ ಮಳೆ ಮತ್ತು ಗಾಳಿ ರೈತರ ಬದುಕನ್ನು ಹೇಗೆ ಯಾತನಾಮಯವಾಗಿಸುತ್ತಿವೆ ಅಂತ ಪ್ರತಿದಿನ ವಿಡಿಯೋಗಳ ಮೂಲಕ ನಿಮಗೆ ತೋರಿಸುತ್ತಿದ್ದೇವೆ. ಸೋಮವಾರ ಕೆ ಆರ್ ಪೇಟೆಯ ಅಂಚೇನಹಳ್ಳಿಯ ಒಬ್ಬ ಹಿರಿಯ ರೈತ ಮಹಿಳೆಯ ತೆಂಗಿನ ತೋಟ ಬರ್ಬಾಗಿದ್ದನ್ನು ತೋರಿಸಿದೆವು, ಮಂಗಳವಾರ ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivaspura) ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಮಾವು ಬೆಳೆಗಾರರ ತೋಪುಗಳಲ್ಲಿ ಗಾಳಿಮಳೆಯಿಂದ ಮರಗಳಲ್ಲಿದ್ದ ಕಾಯಿಗಳು ಚೆಲ್ಲಾಪಿಲ್ಲಿಯಾಗಿ ನೆಲಕ್ಕೆ ಉರುಳಿದ್ದನ್ನು ತೋರಿಸಿದೆವು. ಬುಧವಾರ ನಮಗೆ ಅದೇ ಕೋಲಾರ ಜಿಲ್ಲೆಯ ಕೆಜೆಎಫ್ ತಾಲ್ಲೂಕಿನ (KGF Taluk) ವೆಂಕಟಾಪುರ (Venkatapur) ಹೆಸರಿನ ಗ್ರಾಮದಿಂದ ಲಭ್ಯವಾಗಿದೆ.

ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಮಾವಿನ ತೋಪು ಅಶೋಕ್ ಕೃಷ್ಣಪ್ಪ ಎನ್ನುವವರಿಗೆ ಸೇರಿದ್ದು. ಸುಮಾರು 130 ಎಕರೆ ಮಾವಿನ ತೋಪಿನಲ್ಲಿ ಕೃಷ್ಣಪ್ಪ ಮಾವು ಬೆಳೆಯುತ್ತಾರೆ. ಹಿಂದೆಯೂ ಅವರಿಗೆ ಗಾಳಿ ಮಳೆಯಿಂದ ತೊಂದರೆ ಆಗಿರಬಹುದು. ಆದರೆ ಪ್ರಸಕ್ತ ವರ್ಷ ಆಗಿರುವಷ್ಟು ಹಾನಿ ಇದಕ್ಕೂ ಮೊದಲು ಆಗಿರಾರದು. ತೋಪಿನಲ್ಲಿರುವ ಎಲ್ಲ ಮರಗಳಿಂದ ಅಸಂಖ್ಯಾತ ಕಾಯಿಗಳು ನೆಲಕ್ಕುರುಳಿವೆ. ಮರದಲ್ಲಿ ಉಳಿದಿರುವ ಸಂಖ್ಯೆ ಬಹಳ ಕಡಿಮೆ ಅನಿಸುತ್ತಿದೆ.

ನೆಲಕ್ಕೆ ಬಿದ್ದ ಕಾಯಿಗಳು ಹಾಳಾದಂತೆಯೇ. ಕೆಳಗೆ ಬಿದ್ದಾಗ ಆಗುವ ಪೆಟ್ಟು ಕಾಯಿ ಮಾಗಿದರೂ ಅದನ್ನು ಕೊಳೆಸಿಬಿಡುತ್ತದೆ. ಕೊಳೆತ ಹಣ್ಣಿಗೆ ಹುಳ ಹಿಡಿಯುತ್ತದೆ. ಹಾಗಾಗೇ ಪಾಟಿಗೆ ಹಾಕಲು ಕಾಯಿಗಳನ್ನು ಇಳಿಸುವಾಗ ರೈತರು ಅವು ನೆಲಕ್ಕೆ ಬೀಳದಂತೆ ಬಹಳ ಜಾಗರೂಕತೆ ವಹಿಸುತ್ತಾರೆ.

ಈ ಬಾರಿಯ ಮಾವಿನ ಸೀಸನಲ್ಲಿ ಬೆಲೆ ದುಬಾರಿ ಅನಿಸಿದರೆ ಬೆಳೆಗಾರ, ಮಧ್ಯವರ್ತಿಗಳು ಮತ್ತು ಮಾರಾಟಗಾರರನ್ನು ದೂಷಿಸದೆ ಅಕಾಲಿಕ ಮಳೆ ಮತ್ತು ಗಾಳಿಯನ್ನು ದೂಷಿಸಿ.

ಇದನ್ನೂ ಓದಿ:  ಅಕಾಲಿಕ ಮಳೆ ಮತ್ತು ಗಾಳಿ ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಪಾಲಿಗೂ ಕಂಟಕವಾಗಿ ಪರಿಣಮಿಸಿದೆ