ಕೊಡಗು ಭಾಗದಲ್ಲಿ ಮಳೆ ಆರಂಭ: ನಿಟ್ಟುಸಿರು ಬಿಟ್ಟ ಜಲಾನಯನ ಪ್ರದೇಶದ ಜನರು

| Updated By: ಸಾಧು ಶ್ರೀನಾಥ್​

Updated on: May 13, 2024 | 12:12 PM

ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಬಾರಿಕೆಮೊಟ್ಟೆಯಲ್ಲಿ ಸಿಡಿಲು ಬಡಿದಿದ್ದರಿಂದ ಮನೆಯಲ್ಲಿ ಶಾರ್ಟ್​ ಸರ್ಕ್ಯೂಟ್​ ಆಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್​ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕೊಡಗು: ಕೊಡಗಿನ ಹಲವೆಡೆ ಬೆಳ್ಳಂಬೆಳಗ್ಗೆ ವರುಣ ಸಿಂಚನವಾಗಿದೆ. ಮಡಿಕೇರಿ ತಾಲೂಕಿನ ಹಲವೆಡೆ ವರ್ಷ ಧಾರೆ ಜೋರಾಗಿದೆ. ಮಡಿಕೇರಿ ನಗರದಲ್ಲಿ ( Madikeri Rain) ಅರ್ಧ ಗಂಟೆ ಕಾಲ ವರುಣ ಅಬ್ಬರಿಸಿದ್ದಾನೆ. ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣ ಮೂಡಿದೆ. ಕೊಡಗು ಭಾಗದಲ್ಲಿ ಮಳೆ ಆರಂಭವಾಗಿರುವುದು ಕೇಳಿ ದೂರದ ಕಾವೇರಿ ಜಲಾನಯನ ಪ್ರದೇಶದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ (summer 2024).

ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಬಾರಿಕೆಮೊಟ್ಟೆಯಲ್ಲಿ ಸಿಡಿಲು ಬಡಿದಿದ್ದರಿಂದ ಮನೆಯಲ್ಲಿ ಶಾರ್ಟ್​ ಸರ್ಕ್ಯೂಟ್​ ಆಗಿದೆ. ನಿಂಗಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿದ್ದ ಗೃಹೋಪಯೋಗಿ ಹಾನಿಗೊಂಡಿವೆ. ಹೆಂಚು, ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಸ್ಥಳಕ್ಕೆ ಗ್ರಾಮ ಪಂಚಾಯತ್​ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ