‘ಹೊರಗೆ ಬಿಸಿಲಿದೆ, ಆದರೂ ದಯವಿಟ್ಟು ಬಂದು ವೋಟ್ ಮಾಡಿ’; ಮನವಿ ಮಾಡಿದ ಅಲ್ಲು ಅರ್ಜುನ್

‘ಹೊರಗೆ ಬಿಸಿಲಿದೆ, ಆದರೂ ದಯವಿಟ್ಟು ಬಂದು ವೋಟ್ ಮಾಡಿ’; ಮನವಿ ಮಾಡಿದ ಅಲ್ಲು ಅರ್ಜುನ್

ರಾಜೇಶ್ ದುಗ್ಗುಮನೆ
|

Updated on: May 13, 2024 | 1:06 PM

ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಬಂದು ತಮ್ಮ ವೋಟ್ ಚಲಾಯಿಸುತ್ತಿದ್ದಾರೆ. ಮತದಾನದ ಬಳಿಕ ಎಲ್ಲಾ ಸೆಲೆಬ್ರಿಟಿಗಳು ವೋಟ್ ಮಾಡುವಂತೆ ಅಭಿಮಾನಿಗಳ ಬಳಿ ಕೋರಿದ್ದಾರೆ. ಅದೇ ರೀತಿ ಅಲ್ಲು ಅರ್ಜುನ್ ಅವರು ಕೂಡ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಇಂದು (ಮೇ 23) ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಇದರ ಜೊತೆಗೆ ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆ ಕೂಡ ನಡೆಯುತ್ತಿದೆ. ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಬಂದು ತಮ್ಮ ವೋಟ್ ಚಲಾಯಿಸುತ್ತಿದ್ದಾರೆ. ಮತದಾನದ ಬಳಿಕ ಎಲ್ಲಾ ಸೆಲೆಬ್ರಿಟಿಗಳು ವೋಟ್ ಮಾಡುವಂತೆ ಅಭಿಮಾನಿಗಳ ಬಳಿ ಕೋರಿದ್ದಾರೆ. ಅದೇ ರೀತಿ ಅಲ್ಲು ಅರ್ಜುನ್ (Allu Arjun) ಅವರು ಕೂಡ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ‘ನಿಮ್ಮ ಮತವನ್ನು ಹಾಕಿ. ಇದು ನಮಗೆ ನಿಜಕ್ಕೂ ಜವಾಬ್ದಾರಿಯುತ ದಿನ. ಹೊರಗೆ ತುಂಬಾ ಬಿಸಿಲು ಇದೆ. ಸ್ವಲ್ಪ ಹೆಚ್ಚಿನ ಶ್ರಮ ಹಾಕಿ. ದೇಶದ ಮುಂದಿನ ಐದು ವರ್ಷಗಳಿಗೆ ಇದು ನಿರ್ಣಾಯಕ ದಿನ’ ಎಂದಿದ್ದಾರೆ ಅಲ್ಲು ಅರ್ಜುನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.