ಬೆಂಗಳೂರು: ಮಕ್ಕಳನ್ನು ಶಾಲೆಗೆ ಕಳಿಸಲು ಥರ್ಮೋಕೋಲ್ ಶೀಟನ್ನು ಬೋಟ್ನಂತೆ ಬಳಸಿದ ಪೋಷಕರು
ಜಲಪ್ರಳಯದಂಥ ಸ್ಥಿತಿಯಲ್ಲಿ ಎನ್ಡಿಅರ್ಎಫ್ ಅಥವಾ ಎಸ್ಡಿಅರ್ಎಫ್ ಸಿಬ್ಬಂದಿ ಬಳಸುವ ಬೋಟ್ಗಳ ವ್ಯವಸ್ಥೆ ಮಾಡುವ ಯೋಗ್ಯತೆಯೂ ಬಿಬಿಎಂಪಿಗೆ ಇಲ್ಲದೆ ಹೋಯಿತೇ ಎಂದು ನಗರದ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಧೋ ಅಂತ ಮಳೆ ಸುರಿದಾಗ ಸಾಯಿ ಲೇಔಟ್ನಂತೆ ನಗರದ ಹಲವಾರು ಬಡಾವಣೆಗಳು ಇಂಥ ಸ್ಥಿತಿ ಎದುರಿಸುತ್ತವೆ
ಬೆಂಗಳೂರು: ನಗರದ ಕೊತ್ತನೂರು ಪ್ರದೇಶದಲ್ಲಿರುವ ಸಾಯಿ ಲೇಔಟ್ ಸ್ಥಿತಿ ಇದು. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಥರ್ಮೋಕೋಲ್ ಶೀಟನ್ನು ಬೋಟ್ ಹಾಗೆ ಬಳಸಿದ್ದಾರೆ. ನಮ್ಮ ವರದಿಗಾರನೊಂದಿಗೆ ಅವರು ಹೇಳಿಕೊಳ್ಳುತ್ತಿರುವ ಸಮಸ್ಯೆಯನ್ನು ಕೇಳಿಸಿಕೊಳ್ಳಿ. ಇದು ಮೇಕ್ಶಿಫ್ಟ್ ಬೋಟ್, ಏನಾದರೂ ಹೆಚ್ಚು ಕಡಿಮೆಯಾದರೆ ಮಕ್ಕಳು ನೀರಿಗೆ ಬೀಳುತ್ತವೆ. ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಕೈಲಿ ನಾಮಪತ್ರ ಹಾಕಿಸುವಲ್ಲಿ ಬ್ಯೂಸಿಯಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: