ಉಡುಪಿಯಲ್ಲಿ ನಿಲ್ಲದ ಮಳೆ, ಉಕ್ಕಿ ಹರಿಯುತ್ತಿದೆ ಸೌಪರ್ಣಿಕಾ ನದಿ, ಹಲವು ಗ್ರಾಮಗಳು ಜಲಾವೃತ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 07, 2022 | 6:55 PM

ಗ್ರಾಮದ ಸುಮಾರು 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ ಮತ್ತು ಜನರನ್ನು ಸುರಕ್ಷಿತ ಸ್ಥಾನಕ್ಕೆ ಸಾಗಿಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಉಡುಪಿ (Udupi) ಜಿಲ್ಲೆಯಲ್ಲಿ ಸುರಿಯುತ್ತಿರುವ ಕುಂಭದ್ರೋಣದಿಂದ ಜನಜೀವವ ಅಸ್ತವ್ಯಸ್ತಗೊಂಡಿದೆ ಅಂತ ಹೇಳಿದರೆ ಅದು ಅಂಡರ್ ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತದೆ.  ಸೌಪರ್ಣಿಕಾ ನದಿ (Souparnika River) ಉಕ್ಕಿ ಹರಿಯುತ್ತಿದೆ ಮತ್ತು ನೀರು ನದಿತೀರಕ್ಕಿರುವ ಊರುಗಳನ್ನು ಜಲಾವೃತಗೊಳಿಸಿದೆ. ಟಿವಿ9 ಉಡುಪಿ ವರದಿಗಾರ ಹರೀಷ್ ಪಾಲೇಚಾರ್ ಜಲಾವೃತಗೊಂಡಿರುವ ನಾವುಂದ (Navunda) ಗ್ರಾಮಕ್ಕೆ ಭೇಟಿ ನೀಡಿ ಈ ವರದಿಯನ್ನು ಕಳಿಸಿದ್ದಾರೆ. ಗ್ರಾಮದ ಸುಮಾರು 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ ಮತ್ತು ಜನರನ್ನು ಸುರಕ್ಷಿತ ಸ್ಥಾನಕ್ಕೆ ಸಾಗಿಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ:  Viral Video: ನೀರಿನಲ್ಲಿ ಆಕ್ಟೋಪಸ್​ಗಳು ಬಣ್ಣ ಬದಲಾಯಿಸುತ್ತವೆ ಎಂದು ತಿಳಿದಿದೆಯಾ? ಇಲ್ಲಿದೆ ನೋಡಿ ವಿಡಿಯೋ