ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದಲೇ ದಟ್ಟ ಮೋಡ ಮತ್ತು ಧಾರಾಕಾರ ಮಳೆ!

|

Updated on: Jul 06, 2024 | 12:05 PM

ಸತತ ಮಳೆಯಿಂದಾಗಿ ಉದ್ಯಾವರದ ಪಾಪನಾಶಿನಿ ನದಿ ತುಂಬಿ ಹರಿಯುತ್ತಿದೆ ಮತ್ತು ಅರಬ್ಬೀ ಸಮುದ್ರ ಸಹ ಪ್ರಕ್ಷುಬ್ದಗೊಂಡಿದೆ. ಮೀನುಗಾರರಿಗೆ ನದಿ ಮತ್ತು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಜಿಲ್ಲೆಯ ಬ್ರಹ್ಮಾವರ, ಕುಂದಾಪುರ ಮತ್ತು ಬೈಂದೂರು ತಾಲ್ಲೂಕುಗಳಲ್ಲಿಯೂ ಸತತವಾಗಿ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವರುಣಧೆವನ ಪ್ರತಾಪ ಮುಂದದುವರಿದಿದೆ.

ಉಡುಪಿ: ಉಡುಪಿ ಮತ್ತು ಮಳೆ ಮೇಡ್ ಫಾರ್ ಈಚ್ ಅದರ್? ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಒಂದೇ ಸಮ ಸುರಿಯುತ್ತಿರುವ ಮಳೆಯನ್ನು ಗಮನಿಸುತ್ತಿದ್ದರೆ ಹಾಗನ್ನಿಸದಿರದು ಮಾರಾಯ್ರೇ. ಇಂದು ಬೆಳಗ್ಗೆಯೂ ಉಡುಪಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಧೋ ಅಂತ ಮಳೆ ಸುರಿಯುತ್ತಿದೆ. ನಾವ ಈಗಾಗಲೇ ವರದಿ ಮಾಡಿರುವ ಹಾಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ನಗರದ ದೃಶ್ಯಗಳನ್ನು ಗಮನಿಸಿ. ಬೆಳಗಿನಿಂದಲೇ ನಗರವನ್ನು ದಟ್ಟವಾದ ಮೋಡಗಳು ಅವರಿಸಿದ ಕಾರಣ ರಸ್ತೆಗಳಲ್ಲಿ ಕತ್ತಲೆ ತುಂಬಿದಂತಿದೆ. ವಾಹನ ಸವಾರರು ಹೆಡ್ ಲೈಟ್ ಗಳನ್ನು ಆನ್ ಮಾಡಿಕೊಂಡು ರಸ್ತೆಗಳಲ್ಲಿ ಚಲಿಸುತ್ತಿದ್ದಾರೆ. ಮಕ್ಕಳು ಮತ್ತು ವಯಸ್ಸಾಗಿರುವ ಹಿರಿಯರು ರಸ್ತೆಗಳಿಗೆ ಬರುವಂತಿಲ್ಲ, ಪರಿಸ್ಥಿತಿ ಹಾಗಿದೆ. ಇವತ್ತು ಶನಿವಾರ ಮತ್ತು ತಿಂಗಳ ಮೊದಲ ವಾರಾಂತ್ಯ. ಸಂಬಳ ಸಿಕ್ಕ ಬಳಿಕ ಸಾಮಾನ್ಯವಾಗಿ ಜನ ತಿಂಗಳ ಮೊದಲ ವೀಕೆಂಡ್ ನಲ್ಲಿ ದಿನಸಿ ಮತ್ತು ಇತರ ಶಾಪಿಂಗ್ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಈ ಸಲ ಅದು ನೆರವೇರುವ ಲಕ್ಷಣಗಳಿಲ್ಲ. ಶಾಪಿಂಗ್ ಅನ್ನು ಮುಂದಿನ ವಾರಕ್ಕೆ ಮುಂದೂಡದೆ ವಿಧಿಯಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಉಡುಪಿಯಲ್ಲಿ ಭಾರಿ ಮಳೆಗೆ ಮೊದಲ ಬಲಿ; ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವು

Follow us on