Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ಮತ್ತು ಸುತ್ತಮುತ್ತಲ ಏರಿಯಾಗಳಲ್ಲಿ ಜೋರು ಮಳೆ, ಬೇಸಿಗೆಯ ಧಗೆಯಿಂದ ಕಂಗೆಟ್ಟಿದ್ದ ಜನರಲ್ಲಿ ಸಂತಸ

ಕೊಪ್ಪಳ ಮತ್ತು ಸುತ್ತಮುತ್ತಲ ಏರಿಯಾಗಳಲ್ಲಿ ಜೋರು ಮಳೆ, ಬೇಸಿಗೆಯ ಧಗೆಯಿಂದ ಕಂಗೆಟ್ಟಿದ್ದ ಜನರಲ್ಲಿ ಸಂತಸ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 20, 2024 | 10:20 AM

ಕೊಪ್ಪಳ ಜಿಲ್ಲೆಯಲ್ಲಿ ಧಾರಾಕಾರವಾಗಿ ಅಲ್ಲದಿದ್ದರೂ ಬಿರು ಬೇಸಿಗೆಯ ಧಗೆಯಿಂದ ತತ್ತರಿಸಿದ್ದ ಜನಕ್ಕೆ ಹಾಯೆನಿಸುವಷ್ಟು ಮಳೆ ಆಗಿದೆ. ಕೊಪ್ಪಳ ರಾಜ್ಯದ ಉತ್ತರ ಭಾಗದಲ್ಲ್ಲಿರುವುದರಿಂದ ಪ್ರದೇಶದ ಇತರ ಜಿಲ್ಲೆಗಳಂತೆ ಇಲ್ಲೂ ಬೇಸಿಗೆ ಅಸಹನೀಯವಾಗಿರುತ್ತದೆ. ನೆಲ ಹೆಂಚಿನ ಹಾಗೆ ಕಾದಿರುತ್ತದೆ ಮತ್ತು ಮೇಲಿಂದ ಸೂರ್ಯ ಬೆಂಕಿಯುಗುಳುತ್ತಿರುತ್ತಾನೆ. ಇವತ್ತಿನ ಮಳೆ ಒಂದರೆಡು ದಿನಗಳ ಮಟ್ಟಿಗೆ ವಾತಾವರಣವನ್ನು ಕೊಂಚ ತಂಪು ಮಾಡಿರುತ್ತದೆ.

ಕೊಪ್ಪಳ: ಹವಾಮಾನ ಇಲಾಖೆ (Indian Meteorological Department ) ನೀಡುವ ವರದಿ ಮತ್ತು ಮುನ್ಸೂಚನೆಗಳನ್ನು (forecast) ಪ್ರತಿನಿತ್ಯ ಗಮನಿಸಿಸುವ ಅಭ್ಯಾಸ ಕೆಲವರಿಗಿರುತ್ತದೆ. ಅವರು ಒಂದು ವಿಷಯ ಗಮನಕ್ಕೆ ತಂದುಕೊಂಡಿರಬಹುದು. ಇಲಾಖೆಯು ಬೇಸಿಗೆಯ ದಿನಗಳಲ್ಲಿ ನೀಡುವ ಮುನ್ಸೂಚನೆಗಳು ಸ್ಪಾಟ್ ಆನ್ ಆಗಿರುತ್ತವೆ ಅದರೆ ಮಳೆಗಾಲದಲ್ಲಿ (monsoon season) ನೀಡುವ ಮುನ್ಸೂಚನೆಗಳ ವಿಷಯದದಲ್ಲಿ ಇದೇ ಮಾತನ್ನು ಹೇಳಲಾಗಲ್ಲ. ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಕಳೆದ ವಾರಾಂತ್ಯ ಮತ್ತು ಈ ವಾರದ ಆರಂಭದಲಲ್ಲಿ ಐಎಂಡಿ ವರದಿ ಮಾಡಿತ್ತು. ಅದು ಹೇಳಿದಂತೆಯೇ ಕಳೆದ ದಿನಗಳಲ್ಲಿ ಬೆಳಗಾವಿ, ಮಂಡ್ಯ, ರಾಯಚೂರು, ಚಿಕ್ಕಮಗಳೂರು, ಮಡಿಕೇರಿ ಮತ್ತು ಇನ್ನೂ ಕೆಲ ಭಾಗಗಳಲ್ಲಿ ಮಳೆಯಾಗಿತ್ತು. ಇಂದು ಬೆಳ್ಳಂಬೆಳಗ್ಗೆಯೇ ಕೊಪ್ಪಳ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರುಣದೇವ ಕೃಪೆ ತೋರಿದ್ದಾನೆ. ಕೊಪ್ಪಳ ಜಿಲ್ಲೆಯಲ್ಲಿ ಧಾರಾಕಾರವಾಗಿ ಅಲ್ಲದಿದ್ದರೂ ಬಿರು ಬೇಸಿಗೆಯ ಧಗೆಯಿಂದ ತತ್ತರಿಸಿದ್ದ ಜನಕ್ಕೆ ಹಾಯೆನಿಸುವಷ್ಟು ಮಳೆ ಆಗಿದೆ. ಕೊಪ್ಪಳ ರಾಜ್ಯದ ಉತ್ತರ ಭಾಗದಲ್ಲ್ಲಿರುವುದರಿಂದ ಪ್ರದೇಶದ ಇತರ ಜಿಲ್ಲೆಗಳಂತೆ ಇಲ್ಲೂ ಬೇಸಿಗೆ ಅಸಹನೀಯವಾಗಿರುತ್ತದೆ. ನೆಲ ಹೆಂಚಿನ ಹಾಗೆ ಕಾದಿರುತ್ತದೆ ಮತ್ತು ಮೇಲಿಂದ ಸೂರ್ಯ ಬೆಂಕಿಯುಗುಳುತ್ತಿರುತ್ತಾನೆ. ಇವತ್ತಿನ ಮಳೆ ಒಂದರೆಡು ದಿನಗಳ ಮಟ್ಟಿಗೆ ವಾತಾವರಣವನ್ನು ಕೊಂಚ ತಂಪು ಮಾಡಿರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Bangalore Rain: ಕೊನೆಗೂ ಬೆಂಗಳೂರಿನ ಕೆಲವೆಡೆ ತುಂತುರು ಮಳೆ, ಹಲವೆಡೆ ಮೋಡ ಕವಿದ ವಾತಾವರಣ