‘ರಾಜ್ ಕಪ್’ನಲ್ಲಿ ಡಾಲಿ ಧನಂಜಯ ಟೀಂ ಹೇಗಿದೆ ನೋಡಿ; ಅನಾವರಣವಾಯ್ತು ಜೆರ್ಸಿ
ಡಾಲಿ ಧನಂಜಯ ಅವರು ಒಂದು ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ತಂಡದ ಜೆರ್ಸಿ ಅನಾವರಣ ಜೂನ್ 1ರಂದು ನಡೆಯಿತು. ರಾಘವೇಂದ್ರ ರಾಜ್ಕುಮಾರ್ ಅವರು ಜೆರ್ಸಿ ಅನಾವರಣ ಮಾಡಿದರು.
ಸ್ಯಾಂಡಲ್ವುಡ್ನ ಕಲಾವಿದರು, ತಂತ್ರಜ್ಞರೆಲ್ಲ ಸೇರಿ ‘ರಾಜ್ ಕಪ್’ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿವಿಧ ಟೀಂಗಳನ್ನು ಮಾಡಿಕೊಂಡು ಮ್ಯಾಚ್ಗಳನ್ನು ಆಡಲಾಗುತ್ತಿದೆ. ಡಾಲಿ ಧನಂಜಯ ಅವರು ಒಂದು ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ತಂಡದ ಜೆರ್ಸಿ ಅನಾವರಣ ಜೂನ್ 1ರಂದು ನಡೆಯಿತು. ರಾಘವೇಂದ್ರ ರಾಜ್ಕುಮಾರ್ ಅವರು(Raghavendra Rajkumar) ಜೆರ್ಸಿ ಅನಾವರಣ ಮಾಡಿದರು. ಆ ಬಳಿಕ ಮಾತನಾಡಿದ ಧನಂಜಯ, ‘ನಾನು ಇದೇ ಮೊದಲ ಬಾರಿ ರಾಜ್ ಕಪ್ ಆಡುತ್ತಿದ್ದೇನೆ. ಜೀವನದಲ್ಲಿ ಈವರೆಗೆ ಲೆದರ್ ಬಾಲ್ ಮುಟ್ಟಿಯೇ ಇರಲಿಲ್ಲ’ ಎಂದಿದ್ದಾರೆ ಅವರು. ಇತ್ತೀಚೆಗೆ ಧನಂಜಯ (Dhananjay ) ಅವರು ಕ್ರಿಕೆಟ್ ಪ್ರ್ಯಾಕ್ಟೀಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.