ಗಿಲ್ಲಿ ಬಗ್ಗೆ ಮನೆಮಂದಿಗೆ ಇರುವ ಅಭಿಪ್ರಾಯ ಬದಲಿಸಲು ಯತ್ನಿಸಿದ ರಜತ್
ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದರು. ಅವರು ಬರುವುದಕ್ಕೂ ಮೊದಲು ಗಿಲ್ಲಿ ನಟ ಬಹಳ ಶೈನ್ ಆಗುತ್ತಿದ್ದರು. ಈಗ ಗಿಲ್ಲಿ ಬಗ್ಗೆ ಮನೆಮಂದಿಯ ಅಭಿಪ್ರಾಯವನ್ನು ಬದಲಾಯಿಸಲು ಚೈತ್ರಾ, ರಜತ್ ಯತ್ನಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋಗೆ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದರು. ಅವರು ಬರುವುದಕ್ಕೂ ಮುನ್ನ ಗಿಲ್ಲಿ ನಟ (Gilli Nata) ಸಖತ್ ಶೈನ್ ಆಗುತ್ತಿದ್ದರು. ಈಗ ಅವರ ಬಗ್ಗೆ ಮನೆಮಂದಿಗೆ ಇರುವ ಅಭಿಪ್ರಾಯವನ್ನು ಬದಲಾಯಿಸಲು ಚೈತ್ರಾ ಮತ್ತು ರಜತ್ ಅವರು ಪ್ರಯತ್ನಿಸಿದ್ದಾರೆ. ಇಷ್ಟು ದಿನಗಳ ಕಾಲ ಗಿಲ್ಲಿ ಅವರನ್ನು ನಾಮಿನೇಟ್ ಮಾಡಲು ಬಿಗ್ ಬಾಸ್ ಮನೆಯ ಸದಸ್ಯರು ನೀಡಿದ ಕಾರಣ ಸೂಕ್ತವಾಗಿಲ್ಲ ಎಂದು ರಜತ್ (Rajath) ಅವರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಎಷ್ಟು ಜನರ ಮನಸ್ಸು ಬದಲಾಗಲಿದೆ ಎಂಬುದನ್ನು ಕಾದು ನೋಡಬೇಕು. ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿರುವ ಡಿಸೆಂಬರ್ 11ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
