AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಡೆ, ಗುಗ್ಗು, ವೇಸ್ಟ್ ನನ್ ಮಗನೇ: ಧ್ರುವಂತ್​​ಗೆ ಬಾಯಿಗೆ ಬಂದಂತೆ ಮಾತಾಡಿದ ರಜತ್

ಈ ಮೊದಲು ಕಾಕ್ರೋಚ್ ಸುಧಿ ಅವರು ಸಡೆ ಎಂಬ ಪದ ಬಳಸಿದ್ದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಈಗ ರಜತ್ ಅವರು ಅದೇ ರೀತಿಯ ಕೆಟ್ಟ ಪದಗಳನ್ನು ಬಳಸಿದ್ದಾರೆ. ಬಿಗ್​ ಬಾಸ್ ಮನೆ ರಣರಂಗ ಆಗಿದೆ. ಧ್ರುವಂತ್, ಅಶ್ವಿನಿ ಗೌಡ ಅವರಿಗೆ ರಜತ್ ಕೀಳುಮಟ್ಟದ ಭಾಷೆ ಬಳಸಿದ್ದಕ್ಕೆ ಅಸಮಾಧಾನ ವ್ಯಕ್ತ ಆಗಿದೆ.

ಸಡೆ, ಗುಗ್ಗು, ವೇಸ್ಟ್ ನನ್ ಮಗನೇ: ಧ್ರುವಂತ್​​ಗೆ ಬಾಯಿಗೆ ಬಂದಂತೆ ಮಾತಾಡಿದ ರಜತ್
Dhruvanth, Rajath
ಮದನ್​ ಕುಮಾರ್​
|

Updated on: Dec 09, 2025 | 10:29 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ರಜತ್ ಹಾಗೂ ಧ್ರುವಂತ್ ನಡುವೆ ಕಿರಿಕ್ ಆಗಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಮಾತಿನ ಭರದಲ್ಲಿ ರಜತ್ (Rajath Kishan) ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಜಗಳ ಆಡುವಾಗ ಬಾಯಿ ಬಂದಂತೆ ಮಾತನಾಡಿದ್ದಾರೆ. ಸಡೆ, ವೇಸ್ಟ್ ನನ್ ಮಗ, ಗುಗ್ಗು ಎಂಬಿತ್ಯಾದಿ ಪದಗಳನ್ನು ಅವರು ಬಳಸಿದ್ದಾರೆ. ಅವರ ಮಾತಿನಿಂದ ಹಲವರಿಗೆ ಕಿರಿಕಿರಿ ಆಗಿದೆ. ಅದನ್ನು ಅಶ್ವಿನಿ ಗೌಡ, ಧ್ರುವಂತ್ (Dhruvanth) ಮುಂತಾದವರು ಖಡಕ್ ಆಗಿ ವಿರೋಧಿಸಿದ್ದಾರೆ.

ರಜತ್ ಅವರು ರಫ್ ಆ್ಯಂಡ್ ಟಫ್ ವ್ಯಕ್ತಿ. ಕಳೆದ ಸೀಸನ್​​ನಲ್ಲಿ ಕೂಡ ಅವರು ಅದೇ ರೀತಿ ನಡೆದುಕೊಂಡಿದ್ದರು. ಈಗ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ಅವರು ಇಡೀ ಮನೆಯ ವಾತಾವರಣವನ್ನು ಬದಲಾಯಿಸಿದ್ದಾರೆ. ಜಗಳದ ವೇಳೆ ಕೆಟ್ಟ ಪದಗಳನ್ನು ಬಳಸಿದ್ದರಿಂದ ಅನೇಕರಿಗೆ ಕೋಪ ಬಂದಿದೆ. ಧ್ರುವಂತ್, ಅಶ್ವಿನಿ ಗೌಡ ಜೊತೆ ರಜತ್ ಅವರು ಕಿರಿಕ್ ಮಾಡಿಕೊಂಡಿದ್ದಾರೆ.

ಅಶ್ವಿನಿ ಗೌಡ ಮತ್ತು ರಜತ್ ನಡುವೆ ಕೂಡ ದೊಡ್ಡ ಜಗಳ ಆಗಿದೆ. ಅಶ್ವಿನಿ ಗೌಡ ಅವರಿಗೆ ರಜತ್ ಏಕವಚನದಲ್ಲಿ ಮಾತನಾಡಿದ್ದಾರೆ. ರಜತ್ ಆಡಿದ ಮಾತುಗಳು ತುಂಬಾ ಕೀಳುಮಟ್ಟದಲ್ಲಿ ಇವೆ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ‘ನಿಮ್ಮಷ್ಟು ಕೆಟ್ಟ ಪದಗಳನ್ನು ಈ ಮನೆಯಲ್ಲಿ ಯಾರೂ ಬಳಸಿಲ್ಲ’ ಎಂದು ಅಶ್ವಿನಿ ಗೌಡ ಅವರು ಟೀಕೆ ಮಾಡಿದ್ದಾರೆ.

‘ನೀನು ಕಚಡ’ ಎಂದು ರಜತ್ ಅವರಿಗೆ ಅಶ್ವಿನಿ ಗೌಡ ಬೈಯ್ದಿದ್ದಾರೆ. ‘ನೀನು ಕಣೇ ಕಚಡ’ ಎಂದು ರಜತ್ ಅವರು ತಿರುಗೇಟು ನೀಡಿದ್ದಾರೆ. ಈ ಎಲ್ಲ ಜಗಳದಿಂದಾಗಿ ಬಿಗ್ ಬಾಸ್ ಮನೆ ರಣರಂಗ ಆಗಿದೆ. ಈ ರೀತಿಯ ಕೆಟ್ಟ ಪದಗಳನ್ನು ಬಳಸಿದ್ದಕ್ಕಾಗಿ ವಾರಾಂತ್ಯದ ಸಂಚಿಕೆಯಲ್ಲಿ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಎದುರೇ ಧ್ರುವಂತ್-ರಜತ್ ಜಗಳ

‘ಇಡೀ ಸೀಸನ್ ಹಾಳು ಮಾಡುತ್ತಿದ್ದಾರೆ. ಅಸಭ್ಯವಾಗಿ ಮಾತಾಡುತ್ತಾರೆ. ಶೋ ಘನತೆಯನ್ನು ತಗ್ಗಿಸುತ್ತಿದ್ದಾರೆ. ರೌಡಿಸಂ ಮಾಡುತ್ತಿದ್ದಾರೆ. ಎಲ್ಲರನ್ನೂ ಹೆದರಿಸುವ ರೀತಿ ನಡೆದುಕೊಳ್ಳುತ್ತಿದ್ದಾರೆ’ ಎಂದು ರಜತ್ ವಿರುದ್ಧ ಧ್ರುವಂತ್ ಅವರು ಆರೋಪಗಳ ಮಳೆ ಸುರಿಸಿದ್ದಾರೆ. ‘ಸೀಸನ್ 11ರಲ್ಲಿ ನೀವು ಮಾಸ್ ಇರಬಹುದು. ಆದರೆ ಇಲ್ಲಿ ಯಾರೂ ಡಮ್ಮಿ ಅಲ್ಲ’ ಎಂದು ರಜತ್​​ಗೆ ಅಶ್ವಿನಿ ಗೌಡ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ