Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿಲಿಂಗೇಶ್ವರಕ್ಕೂ ರಜನೀಕಾಂತ್-ಕಮಲ್ ಹಾಸನ್​ಗೂ ಇದೆ ನಂಟು: ವಿಡಿಯೋ

ಕೋಟಿಲಿಂಗೇಶ್ವರಕ್ಕೂ ರಜನೀಕಾಂತ್-ಕಮಲ್ ಹಾಸನ್​ಗೂ ಇದೆ ನಂಟು: ವಿಡಿಯೋ

ಮಂಜುನಾಥ ಸಿ.
|

Updated on: Feb 26, 2025 | 7:12 PM

Kotiligeshwara: ಇಂದು ಶಿವರಾತ್ರಿ ದೇಶದೆಲ್ಲೆಡೆ ಭಕ್ತಿ ಭಾವದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ. ಕೋಲಾರ ಜಿಲ್ಲೆ ಕಮ್ಮಸಂದ್ರದ ಬಳಿ ಇರುವ ಕೋಟಿಲಿಂಗೇಶ್ವರ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ರಾಜ್ಯದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು. ಈ ದೇವಾಲಯಕ್ಕೂ ತಮಿಳಿನ ಸ್ಟಾರ್ ನಟರಾದ ರಜನೀಕಾಂತ್ ಮತ್ತು ಕಮಲ್ ಹಾಸನ್​ ಅವರಿಗೂ ನಂಟಿದೆ. ಹೇಗೆ? ವಿಡಿಯೋ ನೋಡಿ...

ಕೋಲಾರ ಜಿಲ್ಲೆ ಕಮ್ಮಸಂದ್ರದ ಬಳಿ ಇರುವ ಕೋಟಿಲಿಂಗೇಶ್ವರ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ರಾಜ್ಯದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು. ಈ ಕ್ಷೇತ್ರದಲ್ಲಿ ಕೋಟಿ ಶಿವಲಿಂಗಗಳು ಇವೆ ಎಂಬ ಪ್ರತೀತಿ ಇವೆ. ಹಲವಾರು ಮಂದಿ ಭಕ್ತರು ಹರಕೆ ಹೊತ್ತು ಇಲ್ಲಿ ಶಿವಲಿಂಗಗಳನ್ನು ಪ್ರತಿಷ್ಟೆ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಅಂದಹಾಗೆ ಕೋಟಿಲಿಂಗೇಶ್ವರ ಕ್ಷೇತ್ರಕ್ಕೂ ಕಮಲ್ ಹಾಸನ್, ರಜನೀಕಾಂತ್​ಗೂ ನಂಟಿದೆ. ಹೌದು, ಈ ಕ್ಷೇತ್ರದಲ್ಲಿ ಕಮಲಹಾಸನ್, ರಜನೀಕಾಂತ್ ಸೇರಿದಂತೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಶಿವಲಿಂಗಗಳನ್ನು ಸ್ಥಾಪಿಸಿದ್ದಾರೆ. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಸಹ ಶಿವಲಿಂಗವನ್ನು ಸ್ಥಾಪಿಸಿದ್ದಾರೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕಾರಣಿಗಳು ಸಹ ಇಲ್ಲಿ ಶಿವಲಿಂಗ ಸ್ಥಾಪನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ