ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ; ಕೊನೆಯ ವಿಡಿಯೋ ವೈರಲ್
ರಾಕೇಶ್ ಪೂಜಾರಿ ಅವರು ಗೆಳೆಯನ ವಿವಾಹ ಕಾರ್ಯಕ್ರಮದಲ್ಲಿ ಭಾಗಿ ಆಗಿ ಡ್ಯಾನ್ಸ್ ಮಾಡಿದ್ದರು. ಆ ಬಳಿಕ ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಕೇಶ್ ಸಾವಿನ ವಿಚಾರ ಅನೇಕರಿಗೆ ಶಾಕ್ ತಂದಿದೆ. ಆ ಬಗ್ಗೆ ಇಲ್ಲಿದೆ ವಿವರ.
ಗೆಳೆಯರೊಬ್ಬರ ಮೆಹಂದಿ ಕಾರ್ಯಕ್ರಮಕ್ಕೆ ರಾಕೇಶ್ ಪೂಜಾರಿ (Rakesh Poojary) ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದರು. ಗೆಳೆಯರ ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದರು. ಮಧ್ಯ ರಾತ್ರಿವರೆಗೂ ಅವರು ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು. ದಿಢೀರ್ ಭೇಟಿ ನೀಡಿ ಸಂತಸದಲ್ಲಿದ್ದ ರಾಕೇಶ್ ಸಾವು ಕಂಡು ಸ್ನೇಹಿತರು ದಿಗ್ಭ್ರಮೆಗೆ ಒಳಗಾಗಿದ್ದಾರೆ. ಡ್ಯಾನ್ಸ್ ಮಾಡೋ ವೇಳೆ ಅವರು ಎದೆ ಹಿಡಿದುಕೊಂಡಿರೋದು ಕಂಡು ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.